🌹ಶಾಕುಂತಲದ ಮತ್ತೊಂದು ಪುಷ್ಪ:🌹

 *ಬಾಷ್ಪೇಣ ಪ್ರತಿಷಿದ್ಧೆಪಿ ಜಯಶಬ್ದೆ ಜಿತಂ ಮಯಾ/ ಯತ್ತೇ ದೃಷ್ಟಮಸಂಸ್ಕಾರಪಾಟಲೋಷ್ಟಪುಟಂ ಮುಖಮ್ ||*

 _ಶಕುಂತಲೆ ರಾಜನನ್ನು ನೋಡಿ ಜಯಕಾರ ಹಾಕುತ್ತಾ ಮಧ್ಯದಲ್ಲಿ ಕಣ್ಣೀರು ತುಂಬಿಬಂದು ನಿಲ್ಲಿಸುತ್ತಾಳೆ. ಆಗ ದುಷ್ಯಂತ ಹೇಳಿದ ಮಾತು. ಸುಂದರಿ - ಕಣ್ಣೀರಿನಿಂದ ಜಯಶಬ್ದ ತಡೆಯಲ್ಪಟ್ಟರೂ ನಾನು ಜಯಶಾಲಿಯು. ಏಕೆಂದರೆ ಸಂಸ್ಕರಿಸದಿದ್ದರೂ ನಸುಗೆಂಪಿನ ತುಟಿಯಿರುವ ನಿನ್ನ ಮುಖವನ್ನು ನೋಡಿದೆನು. ಪತಿಯ ವಿರಹದಿಂದ ಶಕುಂತಲೆ ಅಲಂಕರಿಸಿಕೊಂಡಿರಲಿಲ್ಲ. ನಿಯಮಶೀಲಳಾದ್ದರಿಂದ ತುಟಿಗಳು ಗಾಢಕೆಂಪು ಕಳೆದು ನಸುಗೆಂಪು ಪಡೆದಿದ್ದವು. ಅಂತಹ ತುಟಿಗಳಿರುವ ಮುದ್ದು ಮುಖವನ್ನು ನೋಡಿ ನಿಜಕ್ಕೂ ನಾನು ಜಯಶೀಲನಾದೆ. ( ನಿನ್ನನ್ನು ಮತ್ತೆ ಪಡೆದು ಧನ್ಯನಾದೆ ಎಂಬ ಭಾವ)_

 📜ಸಂಗ್ರಹ: ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩