🌹ಶಾಕುಂತಲದ ಒಂದು ಸುಮ🌹

 *ತವ ಸುಚರಿತಮಂಗುಲೀಯ ನೂನಂ ಪ್ರತನು ಮಮೇವ ವಿಭಾವ್ಯತೇ ಫಲೇನ/ ಅರುಣನಖಮನೋಹರಾಸು ತಸ್ಯಾಶ್ಚುತಮಸಿ ಲಬ್ಧಪದಂ ಯದಂಗುಲೀಷು||*

 _ದುಷ್ಯಂತನ ಕನವರಿಕೆ ಮುಂದುವರೆಯುತ್ತಿದೆ.ಎಲೆ ಉಂಗುರವೇ, ನಿನ್ನ ಭಾಗ್ಯವೂ ನನ್ನ ಭಾಗ್ಯದಂತೆ ಅಲ್ಪವೆಂದು ಪರಿಣಾಮದಿಂದಲೇ ಕಂಡುಬರುತ್ತದೆ. ( ಅಲ್ಪ ಕಾಲದಲ್ಲಿಯೇ ಅವಳ ಬೆರಳಿನಿಂದ ಜಾರಿ ಹೋಗಿದೆ.) ಕೆಂಪಾದ ಉಗುರುಗಳಿಂದ ಮನೋಹರವಾದ ಅವಳ ಬೆರಳಿನಲ್ಲಿ ಸ್ಥಾನವನ್ನು ಪಡೆದೂ ಕೂಡ ಕೆಳಗುರುಳಿರುವೆ. ನಾನೂ ನಿನ್ನಂತೆ ಕೆಂಪಾದ ಮೊಗದ ಆ ಸುಂದರಿಯನ್ನು ಪಡೆದು ಮರೆತುಬಿಟ್ಟೆ. ಇಬ್ಬರೂ ದುರದೃಷ್ಟಶಾಲಿಗಳು ಎಂಬುದು ಭಾವ. ಮೀನುಗಾರನಿಂದ ಉಂಗುರವನ್ನು ಪಡೆದ ರಾಜನಿಗೆ ಹಿಂದಿನ ಘಟನೆ ನೆನಪಾಗಿ ಉಂಗುರವನ್ನು ಸಂಬೋಧಿಸುವ ರೀತಿ. ಅನುಮಾನ ಅಲಂಕಾರ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩