🌹ಅವಿಮಾರಕದ ಒಂದು ಸುಮ🌹

*रोगादकाला गुरुचन्दनार्द्रा विमुक्तभूषा गतहावभावा | विभाति निर्व्याजमनोहराङ्गी वेदश्रुतिर्हेतुविवर्जितेव ||*

_ಅವಿಮಾರಕನು ಪ್ರಿಯತಮೆಯ ಅವಸ್ಥೆಯನ್ನು ವರ್ಣಿಸುತ್ತಿರುವನು. ಮನಸ್ಸಿಗೆ ಕವಿದ ವಿರಹದು:ಖವೆಂಬ ರೋಗವು ಅವಳಿಗೆ ಯಾವುದೇ ಅಲಂಕಾರ ಮಾಡಿಕೊಳ್ಳದಿರುವಂತೆ ಮಾಡಿದೆ. ದಿನವೂ ದೇಹಕ್ಕೆ ಲೇಪಿಸುತ್ತಿದ್ದ ಕಾಲಾಗುರು ಮತ್ತು ಚಂದನದ ಮಿಶ್ರಣ ಇಂದು ಕಾಣುತ್ತಿಲ್ಲ. ಹಾಗಾಗಿ ದೇಹ ಒಣಗಿದಂತೆ ಕಾಣುತ್ತಿದೆ. ಬಗೆಬಗೆಯ ಆಭರಣಗಳನ್ನು ಇಂದು ನಿರಾಕರಿಸಿರುವಳು ಕುರಂಗಿ.( ರಾಜಕುಮಾರಿಯ ಹೆಸರು) ಅವಳ ನಡೆನುಡಿಯಲ್ಲಿದ್ದ ಒನಪು ವಯ್ಯಾರ ಲಾಲಿತ್ಯ ಇಂದೇಕೋ ಮರೆಯಾಗಿದೆ.ಅಷ್ಟಾಗಿಯೂ ನನ್ನ ಪಾಲಿಗೆ ಅವಳ ಅಂಗಾಂಗಗಳೆಲ್ಲವೂ ಅವಳ ಶರೀರ ಪೂರ್ಣವಾಗಿ ಮನದ ಆಕರ್ಷಣೆಯ ಮೆಟ್ಟಿಲು.ಅದೇ ನನ್ನ ಪ್ರೀತಿ ಹುಟ್ಟಿದ ತೊಟ್ಟಿಲು.ನಿರಾಭರಣ ಸುಂದರಿ ಆಕೆ. ಇಲ್ಲೊಂದು ಸುಂದರ ಉಪಮೆ ಕವಿಯದ್ದು. ತರ್ಕವಿದ್ಯೆಯಿಂದ ರಹಿತವಾದ ವೇದಗಳು ಹೇಗೆ ಶೋಭಿಸುತ್ತವೆಯೊ ಹಾಗೆ ಈ ನನ್ನ ಸುಂದರಿ. ತರ್ಕವಿದ್ಯೆ ವೇದದಲ್ಲಿ ನಾನಾ ಪ್ರಶ್ನೆಗಳುಂಟಾದಾಗ ಗೊಂದಲವೇರ್ಪಟ್ಟಾಗ ಹೀಗೆ ಎಂದು ಸಾರಲು ವಾದದಿಂದ ಪ್ರಾಮಾಣ್ಯ ಸಾಧಿಸಲು ಅವಶ್ಯಕ. ಹಾಗೆಯೇ ರಾಜಕುಮಾರಿ ಎಂದು ತೋರಿಸಿಕೊಳ್ಳಲು ಸಹಜ ಆಕಾಂಕ್ಷೆ ತಣಿಸಲು ಪ್ರಸಾಧನಗಳು ಬೇಕು. ಆದರೆ ಅದಿಲ್ಲದೆಯೂ ಮಂತ್ರಘೋಷವು ಮನವನ್ನು ಎಲ್ಲೋ ಕರೆದುಕೊಂಡು ಹೋಗುವಂತೆ ಅಥವಾ ವೇದಾರ್ಥ ಚಿಂತನೆಯು ಹೊಸ ಹೊಸ ವಿಚಾರಗಳನ್ನು ತಿಳಿಸಿಕೊಟ್ಟು ಆಪ್ತವಾಗುವಂತೆ ಇವಳು ನನ್ನ ಬಾಳೆಂಬ ವೀಣೆಯ ನುಡಿಸಲು ಬಂದ ಶ್ರುತಿ. ಉಪಮಾ ಅಲಂಕಾರ._

ಸಂಗ್ರಹ 📜✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩