🌺ಅವಿಮಾರಕದ ಒಂದು ಶ್ಲೋಕ :🌺

 *ಪ್ರತಿಷಿದ್ಧಂ ಪ್ರಯತ್ನೇನ ಕ್ಷಣಮಾತ್ರಂ ನ ವೀಕ್ಷತೆ/ ಚಿರಾಭ್ಯಸ್ತಪಥಂ ಯಾತಿ ಶಾಸ್ತ್ರಂ ದುರ್ಗುಣಿತಂ ಯಥಾ||*

 _ಅವಿಮಾರಕನು ಪ್ರಿಯೆಯನ್ನು ಚಿಂತಿಸುತ್ತಾ ಹೀಗೆ ನುಡಿಯುತ್ತಿದ್ದಾನೆ. ಅವಳ ನೆನಪು ಮಾಡಬೇಡವೆಂದು ಪ್ರಯತ್ನ ಪೂರ್ವಕವಾಗಿ ತಡೆದರೂ ಈ ನನ್ನ ಕೆಟ್ಟ ಮನವು ಸ್ವಲ್ಪ ಕಾಲವೂ ತಡೆಯದೆ ಅವಳನ್ನೇ ನೆನೆಯುತ್ತಿದೆ. ಅದು ಹೇಗಿದೆಯೆಂದರೆ ಸರಿಯಾಗಿ ಶಾಸ್ತ್ರ ಓದದೇ ( ವಿದ್ಯಾಭ್ಯಾಸ ಸರಿಯಾದ ರೀತಿಯಲ್ಲಿ ಮಾಡದೆ)  ಬಹು ಕಷ್ಟಪಟ್ಟು ನೆನಪು ಮಾಡಿಕೊಂಡರೂ ಕ್ಷಣಮಾತ್ರದಲ್ಲಿ ಮರೆತುಹೋಗುವಂತೆ ನನಗೆ ಅವಳ ನೆನಪಿನಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಅಧ್ಯಯನ ಕಾಲದಲ್ಲಿ ಸರಿ ಓದದೆ ಇದ್ದಾಗ ಬೇಕಾದಾಗ ವಿದ್ಯೆ ನೆನಪಿಗೆ ಬರುವುದಿಲ್ಲವಷ್ಟೇ. ನಾನು ಚಿಂತಿಸುವುದನ್ನು ನಿಲ್ಲಿಸಿದರು ಮನವು ನನಗೆ ವಿರುದ್ಧವಾದದ್ದನ್ನೇ ಮಾಡುತ್ತಿದೆ._

📜 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩