🌺ಅವಿಮಾರಕದ ಮತ್ತೊಂದು ಸುಮ🌺
*ಬಾಷ್ಪೋಪರುದ್ಧಜಡಗದ್ಗದಜಿಹ್ಮಕಂಠಂ ಕಾಹಂ ತವೇತ್ಯಸಕಲಂ ಪ್ರಣಯಾದ್ವದಂತೀ/ ಸದ್ಭಾವತ: ಪ್ರಿಯವಶಂ ಸಮುಪಾಗತಾಪಿ ಸ್ತ್ರೀಭಾವತ: ಪ್ರವದತಿ ಪ್ರತಿಕೂಲಮೇವ||*
_ನಾಯಕನು ಹೋಗುವ ದಾರಿಯಲ್ಲಿ ಒಬ್ಬ ತನ್ನ ಮುನಿದ ಕಾಂತೆಯನ್ನು ಸಮಾಧಾನಿಸುತ್ತಿರುವ ಶಬ್ದ ಕೇಳಿಬರುತ್ತಿದೆ. ಈ ಮಧ್ಯರಾತ್ರಿಯಲ್ಲಿಯೂ ಪ್ರಸನ್ನಳಾಗದ ಪ್ರಿಯೆಯ ವಿಷಯದಲ್ಲಿ ಅವನು ಮಾಡಿರುವ ಅಪರಾಧವಾದರೂ ಏನಿರಬಹುದೆಂದು ಚಿಂತಿಸುತ್ತಾ ಹೇಳುವ ಮಾತಿದು ಅವಳ ಮಾತು ಕಣ್ಣೀರಿನ ಕಾರಣದಿಂದ ಗದ್ಗದಿತವಾಗಿದೆ.ನಿಧಾನವಾಗಿ ಹೊರಡುತ್ತಿದೆ ಶಬ್ದಗಳು. ಗಂಟಲಿನಲ್ಲಿ ಉಳಿಯುತ್ತಿವೆ ಪದಗಳು.ಧ್ವನಿಯು ಗೊಗ್ಗರಾಗಿದೆ.'ನಾನು ನಿನಗೆ ಏನಾಗಬೇಕು ' ಎನ್ನುವ ಪದಗಳನ್ನು ತುಂಬಾ ಪ್ರೀತಿಯಿಂದ ಹೇಳುತ್ತಿರುವ ಆದರೆ ಮಧ್ಯದಲ್ಲಿ ಕೆಲವು ಪದಗಳನ್ನು ಸ್ಪಷ್ಟವಾಗಿ ಹೇಳದೆ ಸೌಜನ್ಯದಿಂದ ಪ್ರಿಯನಲ್ಲಿ ಅನುರಕ್ತಳಾಗಿದ್ದರೂ ಸ್ತ್ರೀ ಸಹಜ ಸ್ವಭಾವದಿಂದ ಪ್ರತಿಕೂಲ ಅಂದರೆ ಕೊಂಕನ್ನೇ ನುಡಿಯುತ್ತಿರುವಳು.ಅವನ ಮೇಲಿನ ಪ್ರೀತಿಯನ್ನು ಸಾಕ್ಷಾತ್ತಾಗಿ ವ್ಯಕ್ತಪಡಿಸದೇ ಪಕ್ಕದಲ್ಲಿ ಇದ್ದರೂ ಸುತ್ತಿಬಳಸಿ ಮಾತನಾಡುತ್ತಿರುವಳು, ತನ್ನನ್ನು ಇನ್ನಷ್ಟು ಅನುನಯಿಸಲಿ ಎಂಬ ಬಯಕೆ ಹಾಗೂ ಎಲ್ಲವನ್ನೂ ಹೇಳಿಕೊಳ್ಳಲು ಹಿಂಜರಿಯುವ ಸ್ತ್ರೀಸಹಜ ನಾಚಿಕೆ._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ