📃ಶಾಕುಂತಲದ ಒಂದು ಆಶೀರ್ವಚನ:📜

 *ತವ ಭವತು ಬಿಡೌಜಾ: ಪ್ರಾಜ್ಯವೃಷ್ಟಿ: ಪ್ರಜಾಸು ತ್ವಮಪಿ ವಿತತಯಜ್ಞೋ ವಜ್ರಿಣಂ ಪ್ರೀಣಯಸ್ವ/ ಯುಗಶತಪರಿವರ್ತಾನೇವಮನ್ಯೋನ್ಯಕೃತ್ಯೈ: ನಯತಮುಭಯಲೋಕಾನುಗ್ರಹಶ್ಲಾಘನೀಯೈ: ||*

 _ಮಾರೀಚರು ಅಂದರೆ ಕಶ್ಯಪರು ರಾಜನಿಗೆ ಹೇಳಿದ ಮಾತು- ಇಂದ್ರನು ನಿನ್ನ ಪ್ರಜೆಗಳಿಗೆ ವಿಪುಲವಾದ ಮಳೆಯನ್ನು ಕೊಡಲಿ.ನೀನು ಪ್ರಜೆಗಳ ಜೊತೆಗೆ ಯಜ್ಞಗಳನ್ನು ಮಾಡಿ ಸ್ವರ್ಗದ ದೇವತೆಗಳನ್ನು ತೃಪ್ತಿಪಡಿಸು. ಹೀಗೆ ಎರಡೂ ಲೋಕಗಳಿಗೆ ಅನುಗ್ರಹಕಾರಿಯಾದ ಶ್ಲಾಘನೀಯ ಪರಸ್ಪರ ಉಪಕಾರದ ಕಾರ್ಯಗಳಿಂದ ನೂರಾರು ಯುಗಗಳನ್ನು ಸುಖವಾಗಿ ಕಳೆಯಿರಿ.ಬಿಡವೆಂದರೆ ಭೇದಿಸುವುದು ಶತ್ರುಗಳನ್ನು  ನಾಶಮಾಡುವ ವೀರ್ಯವುಳ್ಳವನು ಇಂದ್ರ. ದೇವತೆಗಳು ಕಾಲಕಾಲಕ್ಕೆ ಮಳೆಬೆಳೆಗಳನ್ನು ಕರುಣಿಸಲು ಯಜ್ಞಗಳನ್ನು ಮಾಡುವುದು ಕಾರಣ. ಹಾಗೆ ಆಹುತಿ ಪಡೆದ ಅವರು ಎಲ್ಲವನ್ನೂ ನೀಡುತ್ತಾರಷ್ಟೆ.ಯಜ್ಞಾದ್ಭವತಿ ಪರ್ಜನ್ಯೋ ಗೀತೆಯ ಮಾತಿನಂತೆ ಯಜ್ಞಗಳ ಆಚರಣೆ ಮಳೆಗೆ ಕಾರಣ. ಅದನ್ನು ಸರಿಯಾಗಿ ಮಾಡಿ ಪರಸ್ಪರಂ ಭಾವಯಂತ: ಶ್ರೇಯ: ಪರಮವಾಪ್ಸ್ಯಥ ಎಂಬ ಕೃಷ್ಣನ ಮಾತನ್ನು ಉಪದೇಶಿಸಿದ್ದಾರೆ ಕಶ್ಯಪ ಮಹರ್ಷಿಗಳು. ಯಜ್ಞಗಳು ಮುಖ್ಯವಾಗಿ ಐದು ವಿಧ ತಾನು ಓದಿದ್ದನ್ನು ಮನನ ಮಾಡಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಬ್ರಹ್ಮಯಜ್ಞ, ಅತಿಥಿಗಳಿಗೆ ದೀನ ದುರ್ಬಲರಿಗೆ ಉಪಚರಿಸುವುದು ಸಹಾಯ ಮಾಡುವುದು ಮನುಷ್ಯಯಜ್ಞ, ಪ್ರಾಣಿ ಪಕ್ಷಿಗಳಲ್ಲಿ ಕರುಣೆ ಪ್ರಾಕೃತಿಕ ಸಂಪತ್ತು  ( ನೀರು ಗಾಳಿ ಮರ) ಇವುಗಳ ರಕ್ಷಣೆ ಭೂತಯಜ್ಞ, ದೇವಪೂಜೆಯನ್ನು ಶಾಸ್ತ್ರದಲ್ಲಿ ಹೇಳುವಂತೆ ಅರ್ಚನೆ ಅಭಿಷೇಕ ಆಹುತಿಪ್ರದಾನ ಮುಂತಾದ ವಿಧಾನಗಳಿಂದ ಸರಿಯಾಗಿ ಮಾಡುವುದು ದೇವಯಜ್ಞ,  ತಂದೆ ತಾಯಿ ಮುಂತಾದ ಹಿರಿಯರನ್ನು ಬದುಕಿದ್ದಾಗ ಗೌರವಿಸಿ ಸಾಕಿ ಸಲಹಿ ಅನಂತರ ಅವರ ಉತ್ತಮಗುಣಗಳನ್ನು ಸ್ಮರಿಸಿ ಮಾಡುವ ಶ್ರಾದ್ಧ ಮುಂತಾದವು ಪಿತೃಯಜ್ಞ .ಇವಿಷ್ಟು ಜನರಿಂದ ನಡೆದರೆ ಲೋಕಕ್ಷವಾಗಿರುವುದರಲ್ಲಿ ಯಾವ ಸಂಶಯವೂ ಇಲ್ಲವೆನ್ನುವುದು ಕವಿಯ ಆಶಯ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩