🌺ಅವಿಮಾರಕದ ಒಂದು ಕಲ್ಪನಾ ಪ್ರಧಾನ ಶ್ಲೋಕ :🌺

    *ಪ್ರಾಕ್ಸಂಧ್ಯಾ ಕುರುಷೂತ್ತರೇಷು ಗಮಿತಾ ಸ್ನಾತಂ ಪುನರ್ಮಾನಸೇ ಭೂಯೋ ಮಂದರಕಂದರಾಂತರತಟೇಷ್ವಾಮೋದಿತಂ ಯೌವನಮ್ | ಕ್ರೀಡಾರ್ಥಂ ಹಿಮವದ್ಗುಹಾಸು ಚರಿತಾ ದೃಷ್ಟಿಶ್ಚ ಸಂಲೋಭಿತಾ ಯಾಸ್ಯಾವೋ ಮಲಯಸ್ಯ ಚಂದನನಗಾನ್ಮಧ್ಯಾಹ್ನನಿದ್ರಾಸುಖಾನ್ ||*    

            _ವಿದ್ಯಾಧರನೊಬ್ಬ ಲೋಕಾಭಿರಾಮವಾಗಿ ಪ್ರಿಯೆಗೆ ನುಡಿಯುವ ಮಾತು. ಉತ್ತರ ಕುರು ದೇಶದಲ್ಲಿ ಬೆಳಗಿನ ಸಂಧ್ಯಾವಂದನೆ ಮಾಡಲ್ಪಟ್ಟಿತು.ಅಥವಾ ಮುಂಜಾನೆಯ ಸುಂದರ ಸಮಯ ಅಲ್ಲಿ ಕಳೆಯಲ್ಪಟ್ಟಿತು. ಮತ್ತೆ ಸ್ನಾನವನ್ನು ಪವಿತ್ರವಾದ ಬ್ರಹ್ಮನ ಸಂಕಲ್ಪದಿಂದ ನಿರ್ಮಾಣವಾದ ಮಾನಸಸರೋವರದಲ್ಲಿ ಆಯಿತು.ಮನಸಾರೆ ಅಲ್ಲಿ ಮಿಂದೆವು. ಸ್ವಲ್ಪ ಹೊತ್ತಿನ ನಂತರ ಮಂದರ ಪರ್ವತದ ಗುಹೆಗಳಲ್ಲಿ ವಿಹರಿಸಿ ಯೌವನವು ಸಾಫಲ್ಯವನ್ನು ಹೊಂದಿತು. ಮನಸೋ ಇಚ್ಛೆ ಯಾರ ಹಂಗೂ ಇಲ್ಲದಂತೆ ವಿಹರಿಸಿದೆವು. ಪುನ: ಮನದ ಮುದಕ್ಕಾಗಿ ಹಿಮಾಲಯದ ತಪ್ಪಲು ಪ್ರದೇಶದ ಗುಹೆಗಳನ್ನೆಲ್ಲ ವೀಕ್ಷಿಸಿ ಕಣ್ಣಿನ ಬಯಕೆ ತೀರಿಸಿದೆವು. ಈಗ ಮಧ್ಯಾಹ್ನದ ನಿದ್ರೆಗಾಗಿ ಇಲ್ಲಿ ಕಾಣುತ್ತಿರುವ ಮಲಯ ಪರ್ವತದ ಗಂಧದ ಮರಗಳನ್ನು ಆಶ್ರಯಿಸಿ ಸ್ವಲ್ಪ ಕಾಲ ವಿರಮಿಸೋಣ. ವಿದ್ಯಾಧರನ ಮಾತಿನಂತೆ ನಮ್ಮ ಮನವೂ ಕೂಡ. ಕ್ಷಣದಲ್ಲೇ ಅನೇಕ ವಿಷಯಗಳನ್ನು ಅಪೇಕ್ಷಿಸುತ್ತದೆ.ಆದರೆ ಸಾಮರ್ಥ್ಯ ವಿದ್ಯಾಧರರಂತೆ ಇದ್ದರೆ ಅವೆಲ್ಲ ಈಡೆರಬಹುದು. ಇಲ್ಲದಿರೆ ಬರಿಯ ಕಲ್ಪನೆ ಅದರಲ್ಲೇ ಖುಷಿ. ಇಷ್ಟೇ ಅಲ್ಲವೇ ಜೀವನ._  

                     📜 ಸಂಗ್ರಹ ✍*_ಶ್ರೀನಿಧಿ ಅಭ್ಯಂಕರ್.*_

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩