🌹ಶಾಕುಂತಲದ ಒಂದು ರಮಣೀಯ ಶ್ಲೋಕ :🌹

 *ಚೂತಾನಾಂ ಚಿರನಿರ್ಗತಾಪಿ ಕಲಿಕಾ ಬಧ್ನಾತಿ ನ ಸ್ವಂ ರಜ: ಸಂನದ್ಧಂ ಯದಪಿ ಸ್ಥಿತಂ ಕುರಬಕಂ ತತ್ಕೋರಕಾವಕಸ್ಥಯಾ/ ಕಂಠೇಷು ಸ್ಖಲಿತಂ ಗತೇಪಿ ಶಿಶಿರೇ ಪುಂಸ್ಕೋಕಿಲಾನಾಂ ರುತಂ ಶಂಕೇ ಸಂಹರತಿ ಸ್ಮರೋಪಿ ಚಕಿತಸ್ತೂರ್ಣಾರ್ಧಕೃಷ್ಟಂ ಶರಮ್ ||*

 _ದುಷ್ಯಂತನು ಶಕುಂತಲೆಯನ್ನು ನೆನೆಯುತ್ತಾ ವಿರಹವೇದನೆಯಿಂದ ಬಳಲುತ್ತಿದ್ದಾನೆ. ಪ್ರಕೃತಿಯು ಅವನ ದು:ಖದಲ್ಲಿ ಭಾಗಿಯಾಗಿದೆ. ಮಾವಿನ ಮೊಗ್ಗುಗಳು ಹುಟ್ಟಿ ಬಹುಕಾಲದವರೆಗೆ ಅವುಗಳಲ್ಲಿ ಹೂವಿನ ಕೇಸರ ತುಂಬಿಕೊಳ್ಳುತ್ತಿಲ್ಲ. ಕುರಬಕವೆಂಬ ಪುಷ್ಪವು ಅರಳಲು ಸಿಧ್ಧವಾಗಿದ್ದರೂ ಮೊಗ್ಗಿನ ದಶೆಯನ್ನು ಬಿಟ್ಟು ಹೊರಬರುತ್ತಿಲ್ಲ. ಚಳಿಗಾಲ ಮುಗಿದಿದ್ದರೂ ಗಂಡುಕೋಗಿಲೆಗಳ ಧ್ವನಿಯು ಗಂಟಲಿನಲ್ಲಿ ಅಡಗಿಹೋಗಿದೆ.ಮನ್ಮಥನೂ ಕೂಡ ಅರ್ಧ ಎಳೆದ ಬಾಣವನ್ನು ಹಿಂತೆಗೆಯುತ್ತಿದ್ದಾನೆ ಎಂದು ಭಾವಿಸುತ್ತೇನೆ. ಮಾವಿನ ಮೊಗ್ಗುಗಳು ಪರಾಗವನ್ನು ಬಿಡುತ್ತಿಲ್ಲ.ಕುರಬಕ ಪುಷ್ಪವು ದುಷ್ಯಂತನನ್ನು ನೋಡಿ ಅರಳುವ ಸೂಚನೆಯನ್ನೇ ನೀಡುತ್ತಿಲ್ಲ.ಕೋಗಿಲೆಗಳು ತಮ್ಮ ಮಧುರ ನಿನಾದವನ್ನು ಹೊರಡಿಸುತ್ತಿಲ್ಲ. ಮನ್ಮಥನೂ ದುಷ್ಯಂತನ ಅವಸ್ಥೆ ನೋಡಿ ತನ್ನ ಕುಸುಮದ ಬಾಣಗಳನ್ನು ಬಿಡುವುದನ್ನು ನಿಲ್ಲಿಸಿದ್ದಾನೆ .ಹೀಗೆ ದುಷ್ಯಂತನ ನೋವಿನಲ್ಲಿ ಪ್ರಕೃತಿಯು ಪಾಲುಗೊಂಡಿದೆ. ಸೀತೆಯ ವಿರಹದ ಕಾಲದಲ್ಲಿ ರಾಮನು ಅತ್ತಾಗ ಮರಗಿಡಗಳು ಅತ್ತವಂತೆ ಎಂದು ವಾಲ್ಮೀಕಿಗಳ ವರ್ಣನೆ ಅದೇ ರೀತಿ ಪ್ರಕೃತ ಸಂದರ್ಭ. ಸ್ವಭಾವೊಕ್ತಿ ಮತ್ತು ಉತ್ಪ್ರೇಕ್ಷೆ ಅಲಂಕಾರ._

📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩