🌹ಶಾಕುಂತಲದ ಒಂದು ಸೌರಭ:🌹
*ಪ್ರತ್ಯಾದಿಷ್ಟವಿಶೇಷಮಂಡನವಿಧಿರ್ವಾಮಪ್ರಕೋಷ್ಠಾರ್ಪಿತಂ ಬಿಭ್ರತ್ಕಾಂಚನಮೇಕಮೇವ ವಲಯಂ ಶ್ವಾಸೋಪರಕ್ತಾಧರ: ಚಿಂತಾಜಾಗರಣಪ್ರತಾಂತನಯನಸ್ತೇಜೋಗುಣಾದಾತ್ಮನ: ಸಂಸ್ಕಾರೋಲ್ಲಿಖಿತೋ ಮಹಾಮಣಿರಿವ ಕ್ಷೀಣೋಪಿ ನಾಲಕ್ಷ್ಯತೇ||*
_ಕಂಚುಕಿಯು ರಾಜನನ್ನು ವರ್ಣಿಸುತ್ತಿರುವನು ಮೊದಲಿಗೆ ಸುಂದರರಾಗಿರುವರು ಎಲ್ಲ ದಶೆಯಲ್ಲಿಯೂ ರಮಣೀಯರಾಗಿಯೇ ತೋರುತ್ತಾರೆಂದು ಹೇಳುತ್ತಾ( ಅಹೋ ಸರ್ವಾಸ್ವವಸ್ಥಾಸು ರಮಣೀಯತ್ವಮಾಕೃತಿವಿಶೇಷಾಣಾಮ್) ಮುಂದುವರೆಸುತ್ತಿದ್ದಾನೆ. ದುಷ್ಯಂತನು ಶಕುಂತಲೆಯ ನೆನಪಿನಲ್ಲಿ ಕೊರಗುತ್ತಾ ಹೆಚ್ಚಿನ ಅಲಂಕಾರ ಮಾಡಿಕೊಳ್ಳದೇ ( ದು:ಖದಿಂದ) ಎಡಗೈಯ ಮುಂಗೈಯಲ್ಲಿ ಒಂದೇ ಒಂದು ಬಂಗಾರದ ಬಳೆಯನ್ನು ತೊಟ್ಟ, ನಿಟ್ಟುಸಿರು ಬಿಟ್ಟು ಬಾಡಿಹೋದ ಕೆಳದುಟಿಯವನಾಗಿ,( ಅಭ್ಯಾಸಗಳಿಂದಲ್ಲ)😜,ಚಿಂತೆಯಿಂದ ನಿದ್ರೆಗೆಟ್ಟು ಕಣ್ಣೆಲ್ಲ ಕೆಂಪಾಗಿರುವ, ಈ ರಾಜನು ತನ್ನ ತೇಜಸ್ಸಿನಿಂದ ಸಾಣೆಹಿಡಿದ ಉತ್ತಮ ರತ್ನದಂತೆ ಕ್ಷೀಣನಾಗಿದ್ದರೂ ಕಂಡುಬರುವುದಿಲ್ಲ. ನೋಟದಿಂದ ಅವನ ಆಂತರ್ಯದ ತುಮುಲ ಗ್ರಹಿಸಲು ಸಾಧ್ಯವಿಲ್ಲ. ದೊಡ್ಡ ವ್ಯಕ್ತಿಗಳು ಒಳಗೆ ಎಷ್ಟೇ ದು:ಖವಿದ್ದರೂ ಅದನ್ನು ಪ್ರದರ್ಶಿಸುವುದಿಲ್ಲವಷ್ಟೇ! ರತ್ನಗಳನ್ನು ಸಾಣೆ ಹಿಡಿದು ರೂಪ ಕೊಟ್ಟಷ್ಟು ಅವುಗಳ ಗಾತ್ರ ಕಿರಿದಾದರೂ ಕಾಂತಿ ಹಿರಿದಾಗುವುದು ಹಾಗೆಯೇ ದುಷ್ಯಂತನು ಚಿಂತಿತನಾಗಿ ಕ್ಷಯಿಸುತ್ತಿದ್ದರೂ ಕಾಂತಿ ಕಳೆದುಕೊಂಡಿಲ್ಲ.ಸಾಮಾನ್ಯವಾಗಿ ಬಲಗೈಯಲ್ಲಿ ಧರಿಸುವ ಕಂಕಣ ವಿರಹವಿಮನಸ್ಕತೆಯಿಂದಾಗಿ ಎಡಗೈಗೆ ಬಂದಿದೆ.ಬಿಸಿಯುಸಿರು ಸಹಜವಾದ ಕೆಂಪನ್ನು ಪಡೆದುಕೊಂಡಿರುವ ತುಟಿ._
📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ