🌹ಶಾಕುಂತಲದ ಸುಂದರ ಪುಷ್ಪ : 🌹
*ಜಾನೇ ತಪಸೋ ವೀರ್ಯಂ ಸಾ ಬಾಲಾ ಪರವತೀತಿ ಮೇ ವಿದಿತಮ್ |ಅಲಮಸ್ಮಿ ತತೋ ಹೃದಯಂ ತಥಾಪಿ ನೇದಂ ನಿವರ್ತಯಿತುಮ್ ||*
_ದುಷ್ಯಂತನು ಶಕುಂತಲೆಯನ್ನು ನೋಡಿ ಅವಳಲ್ಲೇ ಮನವನ್ನು ಇಟ್ಟಿದ್ದಾನೆ. ಅವಳನ್ನು ಕ್ಷಣಕಾಲ ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಆದರೆ ಪರಿಸ್ಥಿತಿ ಭಿನ್ನವಾಗಿದೆ.ಇಂತಹ ಸಂದರ್ಭದಲ್ಲಿ ಆಡುವ ಮಾತು. ಋಷಿಗಳ ತಪಸ್ಸಿನ ಸಾಮರ್ಥ್ಯ ಎಷ್ಟೆಂದು ಬಲ್ಲೆನು.ಶಾಪದಿಂದ ಭಸ್ಮ ಮಾಡಬಲ್ಲ ಮಹನೀಯರು. ಹಾಗೆಯೇ ಆ ಶಕುಂತಲೆ ಪರಾಧೀನಳು ಸ್ವತಂತ್ರಳಲ್ಲ, ಅವಳ ನಿರ್ಧಾರ ಹಿರಿಯರನ್ನು ಅವಲಂಬಿಸಿ ಸಾಕಾರಗೊಳ್ಳುವುದು ಎಂಬುದನ್ನೂ ಬಲ್ಲೆ. ಹಾಗಿದ್ದರೂ ಈ ಕೆಟ್ಟ ಮನಸ್ಸು ಅವಳನ್ನು ನಿರಂತರವಾಗಿ ಧ್ಯಾನಿಸುತ್ತಿದೆ.ಅವಳನ್ನು ಬಿಟ್ಟಿರುವುದು ಅಸಾಧ್ಯವೆಂದೆನಿಸುತ್ತಿದೆ. ಶಕುಂತಲೆಯನ್ನು ಪಡೆಯುವುದು ಋಷಿಗಳ ನಿರ್ಧಾರವನ್ನು ಅವಲಂಬಿಸಿದೆ, ಒಂದು ವೇಳೆ ಅದಕ್ಕೂ ಮೀರಿ ನಡೆದರೆ ಋಷಿಗಳ ಕೋಪಕ್ಕೆ ಗುರಿಯಾಗಿ ಏನು ಬೇಕಾದರೂ ಘಟಿಸಬಹುದು. ಆದರೆ ಯಾವಾಗಲೂ ಚಂಚಲವಾದ ಈ ಮನ ಈ ಸಮಯದಲ್ಲಿ ಶಕುಂತಲೆಯನ್ನು ಬಿಟ್ಟು ಚಲಿಸುತ್ತಿಲ್ಲ. ಏನು ಮಾಡಲಿ ಈ ಸಮಯದಿ? ನಮ್ಮ ಪರಿಸ್ಥಿತಿ ಹಲವು ಬಾರಿ ಹೀಗೆಯೇ ಇರುತ್ತದೆ. ಕೆಟ್ಟದ್ದೆಂದು ತಿಳಿದರೂ ಅಥವಾ ಸಿಗುವುದು ಕಷ್ಟವೆಂದೆನಿಸಿದರೂ ಅದನ್ನೇ ಬಯಸುತ್ತದೆ. ಮನವನ್ನು ನಿಯಂತ್ರಿಸಲು ಸಾಧ್ಯವೇ ಆಗುವುದಿಲ್ಲ. ಅನರ್ಥ ಘಟಿಸಿದ ಮೇಲೆ ನಮ್ಮನ್ನು ನಾವು ನಿಂದಿಸಿಕೊಳ್ಳುತ್ತೇವೆ ಅಲ್ಲವೇ!._
ಸಂಗ್ರಹ✍*ಶ್ರೀನಿಧಿ ಅಭ್ಯಂಕರ್.*

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ