ಚಾರುದತ್ತ ೧೮

👳‍♀ಚಾರುದತ್ತ ಬೆಳಕು- ೧೮👳‍♀

*क: श्रद्धास्यति भूतार्थं सर्वो मां तूलयिष्यति । शङ्कनीया हि दोषेषु निष्प्रभावा दरिद्रता ।।*

_ಚಾರುದತ್ತನ ಮನೆಗೆ ಕಳ್ಳ ನುಗ್ಗಿ ಸಂಪತ್ತನ್ನು ಕದ್ದಿದ್ದಾನೆ. ವಿದೂಷಕನು ಅವನಲ್ಲಿದ್ದ ಸುವರ್ಣದ ಥೈಲಿಯನ್ನು ಚಾರುದತ್ತನೆಂದು ತಿಳಿದು ಕಳ್ಳನಿಗೆ ಕೊಟ್ಟಿದ್ದಾನೆ. ಕಳ್ಳತನವಾದ ಸುದ್ದಿ ತಿಳಿದ ತಕ್ಷಣ ಅಬ್ಬಾ ಬದುಕಿದೆ ರಾತ್ರಿಯೇ ನಿನಗೆ ಬಂಗಾರ ಕೊಟ್ಟೆ ಎಂದಾಗ ಚಾರುದತ್ತ ಗಾಬರಿಗೊಳ್ಳುತ್ತಾನೆ. ಆದರೇನು ಮಾಡುವುದು, ತನ್ನ ಬಳಿ ಕೊಟ್ಟಿಲ್ಲ ಎಂದರೆ ತನ್ನ ಮೇಲೆ ಇವರು ಸಂಶಯಪಡುತ್ತಾರೆ. ಏಕೆಂದರೆ ತನ್ನ ಈಗಿನ ದಾರಿದ್ರ್ಯದ ಸ್ಥಿತಿ ಹಾಗಿದೆ. ನನ್ನ ಹಿಂದಿನ ಪ್ರಾಮಾಣಿಕತೆ ಅಥವಾ ಉದಾರತೆಯನ್ನು ಯಾರು ತಾನೇ ನಂಬುವರು? ವಸಂತಸೇನೆಯ ಆಭರಣ ಕಳ್ಳನು ಅಪಹರಿಸಿದನೆಂದು ನುಡಿದರೆ ಎಲ್ಲರೂ ನನ್ನನ್ನೇ ಕಳ್ಳನೆಂದು ಶಂಕಿಸುತ್ತಾರೆ ಹೊರತು ಕಳ್ಳತನದ ವಿಷಯ ನಂಬಲಾರರು. ಈಗಿನ ನನ್ನ ದಟ್ಟ ದಾರಿದ್ರ್ಯವು ನನ್ನಲ್ಲಿ ಯಾವ ಬಗೆಯ ತಪ್ಪು ಇಲ್ಲದಿದ್ದರೂ ತಪ್ಪನ್ನು ಹೊರಿಸುತ್ತದೆ. ಮಾನವನ ದರಿದ್ರತೆ ಎಲ್ಲೋ ಯಾರಿಂದಲೋ ಆಗುವ ಮೋಸ- ಕಳ್ಳತನ ಮುಂತಾದ ಕುಕೃತ್ಯಗಳ ವಿಷಯದಲ್ಲಿ ಪ್ರಾಮಾಣಿಕನನ್ನೂ ಶಂಕಿಸುತ್ತದೆ. ದುಡ್ಡಿಗಾಗಿ ಹೀಗೆ ಮಾಡಿರಬಹುದು ಎಂಬ ಅತ್ಯಂತ ಸಹಜ ಎಂಬಂತಿರುವ ಮಾತು. ಕವಿ ಅದನ್ನೇ ನುಡಿಸಿದ್ದಾನೆ. ವಸ್ತುತಃ ಕಳ್ಳತನ ಅಥವಾ ಅಪಹಾರಕ್ಕೆ ಬಡತನ-ಶ್ರಿಮಮತಿಕೆಯ ಭೇದವಿಲ್ಲ. ಅತೃಪ್ತಿ ಒಂದೇ ಮುಖ್ಯ ಕಾರಣ._


ಸಂಗ್ರಹ: ಶ್ರೀನಿಧಿ ಅಭ್ಯಂಕರ್.

http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩