ಧರ್ಮಾಚರಣೆ ೨೭

      ಧರ್ಮಾಚರಣೆ---- ೨೭

ಇಷ್ಟಿಶ್ರಾದ್ಧೇ ಕ್ರತೂದಕ್ಷೌ ಸತ್ಯೌ ನಾಂದೀಮುಖೇ ವಸೂ | ನೈಮಿತ್ತಿಕೇ ಕಾಮಕಾಲೌ ಕಾಮ್ಯೇ ಚ ಧುರಿಲೋಚನೌ | ಪುರೂರವಾರ್ದ್ರವೌ ಚೈವ ಪಾರ್ವಣೇ ಸಮುದಾಹೃತೌ || ಹೇಮಾದ್ರಿ - ಶಂಖ, ಬೃಹಸ್ಪತಿ ವಚನ ||

ಇಷ್ಟಿಶ್ರಾದ್ಧ ಅಂದರೆ ಸಂಸ್ಕಾರ ಪೂರ್ವಕ ಅಗ್ನಿಯನ್ನು ಸ್ಥಾಪಿಸಿ ಮಾಡುವ ಕರ್ಮಗಳ ಆದಿಯಲ್ಲಿ ಅಂದರೆ ದೊಡ್ಡ ದೊಡ್ಡ ಯಾಗಗಳ ಆದಿಯಲ್ಲಿ ಮಾಡುವ ನಾಂದೀಶ್ರಾದ್ಧದಲ್ಲಿ ಕ್ರತುದಕ್ಷ ಹೆಸರಿನ ವಿಶ್ವೇದೇವತೆಗಳನ್ನು, ಸಾಮಾನ್ಯ ಕರ್ಮಗಳ ನಾಂದಿಯಲ್ಲಿ ಸತ್ಯವಸು ಹೆಸರಿನ ವಿಶ್ವೇದೇವತೆಗಳನ್ನು, ನವಶ್ರಾದ್ಧ ಹಾಗೂ ದ್ವಾದಶಮಾಸಿಕಗಳಲ್ಲಿ ಕಾಮಕಾಲರೆಂಬ  ವಿಶ್ವೇದೇವತೆಗಳನ್ನು,  ಮಹಾಲಯ ಹಾಗೂ ಕಾಮ್ಯವೆಂದು ತ್ರಿಪಿಂಡಿ ಮೊದಲಾದ ಶ್ರಾದ್ಧವನ್ನು ಮಾಡುವಾಗ ಧುರಿ- ಲೋಚನರೆಂಬ ವಿಶ್ವೇದೇವತೆಗಳನ್ನು, ಪ್ರತಿವಾರ್ಷಿಕ ಶ್ರಾದ್ಧ ಹಾಗೂ ಪಾರ್ವಣ ಶ್ರಾದ್ಧಗಳಲ್ಲಿ ಅಂದರೆ ಪರ್ವಗಳಲ್ಲಿ ಮಾಡುವುದಾದರೆ ಆಗ ಪುರೂರವ- ಆರ್ದ್ರವ ಹೆಸರಿನ ವಿಶ್ವೇದೇವತೆಗಳನ್ನು ಆರಾಧಿಸಬೇಕು. ಶ್ರಾದ್ಧ ಎಂದ ಕ್ಷಣ ದೇವತೆಗಳೆಲ್ಲ ಒಂದೇ ಅಲ್ಲ, ಭೇದಗಳಿಗನುಗುಣವಾಗಿ ದೇವತೆಗಳು ಭಿನ್ನರಿದ್ದಾರೆ. ಕ್ರಿಯಾ ವೈವಿಧ್ಯ, ದೇವತಾ ವೈವಿಧ್ಯ, ಪಾಕ ವೈವಿಧ್ಯ ಹೀಗೆ ವಿವಿಧತೆಯಲ್ಲಿ ಏಕತೆಯೇ ನಮ್ಮ ಸಂಸ್ಕೃತಿ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩