ಧರ್ಮಾಚರಣೆ ೨೫
ಧರ್ಮಾಚರಣೆ--೨೫
ವಿಭಕ್ತಾಸ್ತು ಪೃಥಕ್ಕುರ್ಯುಃ ಪ್ರತಿಸಂವತ್ಸರಾದಿಕಮ್ | ಏಕೇನೈವಾವಿಭಕ್ತೇಷು ಕೃತೇ ಸರ್ವೈಸ್ತು ತತ್ಕೃತಮ್ || ಮದನರತ್ನ ||
ಊರ್ಧ್ವಂ ಸಪಿಂಡೀಕರಣಾತ್ಸರ್ವೇ ಕುರ್ಯುಃ ಪೃಥಕ್ ಪೃಥಕ್ ||ಲಘುಹಾರೀತ ||
ಅಣ್ಣ ತಮ್ಮಂದಿರು ಬೇರೆ ಬೇರೆ ಮನೆ ಮಾಡಿ ವಾಸಿಸುತ್ತಿದ್ದ ಪಕ್ಷದಲ್ಲಿ ಪ್ರತಿವರ್ಷದ ಶ್ರಾದ್ಧವಾಗಲಿ, ಮಹಾಲಯವಾಗಲಿ ಪ್ರತ್ಯೇಕವಾಗಿ ಮಾಡಬೇಕು. ಅವಿಭಕ್ತ ಕುಟುಂಬವಾಗಿದ್ದರೆ ಅಂದರೆ ಅಣ್ಣತಮ್ಮಂದಿರು ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರೆ ಆಗ ಹಿರಿಯನು ಮಾತ್ರ ಮಾಡಿದರೆ ಸಾಕಾಗುತ್ತದೆ. ಅಣ್ಣ ಊರಲ್ಲಿ ಮಾಡುತ್ತಾನೆ ನಾನು ಪ್ರತ್ಯೇಕ ಮಾಡಬೇಕೆಂದಿಲ್ಲ ಅಥವಾ ನಾನೂ ಅವನೊಡನೆ ಸೇರಿ ಮಾಡುತ್ತೇನೆ ಖರ್ಚು ಉಳಿಯುತ್ತದೆ ಊರಿಗೂ ಹೋದಂತಾಗುತ್ತದೆ ಇತ್ಯಾದಿಗೆ ಶಾಸ್ತ್ರದ ಸಮ್ಮತಿ ಇಲ್ಲ. ಅಡುಗೆ ಬೇರೆಯಾದರೆ ಶ್ರಾದ್ಧವೂ ಬೇರೆಯಾದಂತೆ. ಮೃತರ ಸಪಿಂಡೀಕರಣದವರೆಗಿನ ಕಾರ್ಯಗಳು ಮಾತ್ರ ಹಿರಿಯನಿಂದ ಮಾಡಲ್ಪಡುವವು. ಉಳಿದ ವಾರ್ಷಿಕ ಕರ್ಮಗಳು ನಿಯಮಿತವಾಗಿ ಪ್ರತ್ಯೇಕ ಮಾಡಬೇಕು. ಆಭರಣ-ಮನೆ- ಸಂಪತ್ತು-ವಾಹನಾದಿಗಳನ್ನು ಯಥೇಚ್ಛವಾಗಿ ಪ್ರತ್ಯೇಕವಾಗಿ ಸಂಪಾದಿಸಿ ಪಿತೃಕರ್ಮಕ್ಕೆ ಮಾತ್ರ ಇನ್ನೊಬ್ಬರನ್ನು ಆಶ್ರಯಿಸುವುದು ಅಧಮ ಪಕ್ಷ. ಅಣ್ಣ ತಮ್ಮಂದಿರ ವಾಸ-ಪಾಕ ಬೇರೆಯಾದರೆ ದೈವ ಕರ್ಮಗಳಂತೆ ಪಿತೃಕರ್ಮವೂ ಪ್ರತ್ಯೇಕ ಆಚರಣೀಯವಾದುದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ