ಧರ್ಮಾಚರಣೆ ೪೭

    ಧರ್ಮಾಚರಣೆ--- ೪೭

ಅಜ್ಞಾತ್ವಾ ಧರ್ಮಶಾಸ್ತ್ರಾಣಿ ಪ್ರಾಯಶ್ಚಿತ್ತಂ ದದಾತಿ ಯಃ | ಪ್ರಾಯಶ್ಚಿತ್ತೀ ಭವೇತ್ಪೂತಃ ಕಿಲ್ಪಿಷಂ ಪರ್ಷದಿ ವ್ರಜೇತ್ || ಪರಾಶರ ಸ್ಮೃತಿ||
  
ಧರ್ಮಜ್ಞರಾಗಲಿ, ಜ್ಯೋತಿಷಿಗಳಾಗಲಿ, ಪಂಡಿತರಾಗಲಿ ಯಾವುದಾದರೂ ಪಾಪಗಳಿಗೆ, ದೋಷಗಳಿಗೆ, ಕುಕರ್ಮಗಳಿಗೆ ಪ್ರಾಯಶ್ಚಿತ್ತ ಹೇಳುವಾಗ ಶಾಸ್ತ್ರದ ನೆರವನ್ನು ಪಡೆದು ಹೇಳಬೇಕು. ಕರ್ತೃವಿನ ಅನುಕೂಲ,ಕಾಲ, ದೇಶ, ಧರ್ಮ ಇವುಗಳನ್ನು ಗಮನಿಸಿ ಶಾಸ್ತ್ರೋಕ್ತವಾದ ಪ್ರಾಯಶ್ಚಿತ್ತ ಹೇಳಿದರೆ ಪುಣ್ಯಭಾಗಿಯಾಗುವನು. ಹಾಗಲ್ಲದೆ ತನ್ನ ಮನಸ್ಸಿಗೆ ಬಂದಂತೆ ಉದ್ದುದ್ದ ಅಥವಾ ಮಾಡಲು ಅಸಾಧ್ಯವೆನಿಸುವಂತಹ ದೊಡ್ಡ ದೊಡ್ಡ ಪ್ರಾಯಶ್ಚಿತ್ತ ಹೇಳಿದರೆ ಕರ್ತೃವಿನ ಪಾಪ ಕಳೆಯುವ ತನಕ ಹೇಳಿದವನು ದೋಷವನ್ನು ಪಡೆಯುತ್ತಾನೆ. ಇನ್ನೊಬ್ಬರ ಪಾಪ ಕಳೆಯಲು ಹೋಗಿ ತಾನೇ ಪಾಪಿಯಾಗುವನು ಅಂತಹ ವ್ಯಕ್ತಿ. ಹಾಗಾಗಿ ಸ್ವಲ್ಪವೇ ಕಲಿತು ಅಥವಾ ಏನನ್ನೂ ಕಲಿಯದೇ ಉಪದೇಶ ಮಾಡುವ ವೃತ್ತಿ ಕೈಗೊಂಡರೆ ಶೀಘ್ರ ಅವಸಾನ ಹೊಂದುವರು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩