ಧರ್ಮಾಚರಣೆ ೨೯

ಧರ್ಮಾಚರಣೆ---೨೯

ಶ್ರುತಿಸ್ಮೃತಿವಿರೋಧೇತು ಶ್ರುತಿರೇವ ಗರೀಯಸೀ | ಅವಿರೋಧೇ ಸದಾ ಕಾರ್ಯಂ ಸ್ಮಾರ್ತಂ ವೈದಿಕ ವತ್ಸದಾ || ಜಾಬಾಲಸ್ಮೃತಿ ||

ವೇದ ಮತ್ತು ಸ್ಮೃತಿ ಗಳ ನಡುವೆ ಕೆಲವೊಂದು ವಿಚಾರಗಳಲ್ಲಿ ಸಾಮ್ಯತೆ ಕಾಣದಿದ್ದಾಗ ಅಥವಾ ವಿರೋಧ ಬಂದಾಗ ವೇದವಾಕ್ಯಗಳನ್ನೇ ಪ್ರಮಾಣವೆಂದು ಸ್ವೀಕರಿಸಬೇಕು. ಏಕೆಂದರೆ ಶ್ರುತಿ ಅಪೌರುಷೇಯ. ಸ್ಮೃತಿಗಳು ಪೌರುಷೇಯವಾದ್ದರಿಂದ ಕೆಲವು ದೋಷಗಳು ಕಂಡುಬರಬಹುದು. ಒಂದು ವೇಳೆ ವಿರೋಧ ಕಂಡುಬರದಿದ್ದಾಗ ಸ್ಮಾರ್ತ ಕರ್ಮಗಳನ್ನು ಅಂದರೆ ಸ್ಮೃತಿ ಆಧಾರಿತ ಕರ್ಮಗಳನ್ನು ವೈದಿಕ ಕರ್ಮಗಳಂತೆ ಆಚರಿಸಬಹುದು. ಪರಮ ಪ್ರಮಾಣ ವೇದವೇ ಹೊರತು ನಂತರ ಹುಟ್ಟಿಕೊಂಡ ಗ್ರಂಥಗಳಲ್ಲ. ಅದರಲ್ಲೂ ಈ ಯುಗದ ವಿದ್ವಾಂಸರ ಗ್ರಂಥಗಳು ವೇದ ವಿರೋಧ ಪ್ರತಿಪಾದಿಸುತ್ತಿದ್ದರೆ ಯಾವ ವಿಷಯದಲ್ಲಾದರೂ ಅವು ತ್ಯಾಜ್ಯವೇ ಸರಿ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩