ಧರ್ಮಾಚರಣೆ ೪೨

   ಧರ್ಮಾಚರಣೆ--- ೪೨

ಅಷ್ಟವರ್ಷಾ ಭವೇದ್ಗೌರೀ ನವವರ್ಷಾ ತು ರೋಹಿಣೀ | ದಶವರ್ಷಾ ಭವೇತ್ಕನ್ಯಾ ಅತ ಊರ್ಧ್ವಂ ರಜಸ್ವಲಾ || ಪರಾಶರ ಸ್ಮೃತಿ||

ನಮ್ಮ ಪರಂಪರೆಯಲ್ಲಿ ಅದರಲ್ಲೂ ನವರಾತ್ರಿ ದುರ್ಗಾಪೂಜೆ ತ್ರಿಕಾಲ ಪೂಜೆ ಮೊದಲಾದ ಸಮಯದಲ್ಲಿ ಸ್ತ್ರೀಯನ್ನು ದೇವಿಯೆಂದು ಭಾವಿಸಿ ಪೂಜಿಸುವ ಉಪಚರಿಸುವ ಕ್ರಮ ಇದೆ. ಇದಕ್ಕೆ ಎಷ್ಟು ವರ್ಷದೊಳಗಿನ ಸ್ತ್ರೀಯರು  ಯೋಗ್ಯರು ಎಂದರೆ ಅದಕ್ಕೆ ಶಾಸ್ತ್ರದ ವಚನ ಹೀಗಿದೆ- ಎಂಟು ವರ್ಷದ ಹುಡುಗಿಯನ್ನು ಗೌರೀ ಎನ್ನುತ್ತಾರೆ. ಕೆಲವು ಪೂಜೆಗಳಲ್ಲಿ ಗೌರೀ ಆರಾಧನೆ ಹೇಳಲ್ಪಟ್ಟಿದೆ. ಇನ್ನು ಒಂಭತ್ತು ವರ್ಷದ ಹುಡುಗಿಗೆ ರೋಹಿಣಿ ಎಂಬ ಹೆಸರು. ದಶವರ್ಷದ ಹುಡುಗಿ ಕನ್ಯೆ ಎಂದು ಕರೆಸಿಕೊಳ್ಳುವಳು. ಕನ್ಯೆಯನ್ನು ಕರೆಸಿ ಮಂಗಲವಸ್ತುಗಳನ್ನಿತ್ತು ದೇವೀಪ್ರೀತ್ಯರ್ಥ ಉಪಚಾರ ಮಾಡುವಾಗ ಆಯಾ ವರ್ಷದ ಸ್ತ್ರೀ ಯರನ್ನು ಆರಾಧಿಸಬೇಕು. ಆಗ ಆ ಆರಾಧನೆ ಸಾರ್ಥಕವಾಗುತ್ತದೆ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩