ಧರ್ಮಾಚರಣೆ ೫೬

ಧರ್ಮಾಚರಣೆ-೫೬

ತಾಂಬೂಲೇಕ್ಷುಫಲಂ ಚೈವ ಭುಕ್ತಸ್ನೇಹಾನುಲೇಪನೇ | ಮಧುಪರ್ಕೇ ಚ ಸೋಮೇ ಚ ನೋಚ್ಛಿಷ್ಟಂ ಧರ್ಮತೋ ವಿದುಃ || ಪರಾಶರ ಸ್ಮೃತಿ ||

ತಾಂಬೂಲವನ್ನು ಅನೇಕರು ಒಂದೇ ತಟ್ಟೆಯಿಂದ ಸ್ವೀಕರಿಸುತ್ತಿದ್ದರೂ ಉಚ್ಛಿಷ್ಠ ದೋಷವಿಲ್ಲ. ಕಬ್ಬನ್ನು ಅನೇಕರು ತುಂಡುಗಳನ್ನು ಸ್ವೀಕರಿಸಿದಾಗ ಪರ್ವಭೇದವಿಲ್ಲದಾಗಲೂ ಅಂದರೆ ಒಂದೇ ಗಿಣ್ಣಿನಲ್ಲಿ ಅನೇಕ ತುಂಡನ್ನು ತಿಂದರೂ ಎಂಜಲ ದೋಷವಿಲ್ಲ. ಎಣ್ಣೆ ಅಥವಾ ಜಿಡ್ಡಿನ ಪದಾರ್ಥ ತಿಂದು ಕೈಯ ಜಿಡ್ಡನ್ನು ಅಂಗಗಳಿಗೆ ಲೇಪಿಸಿಕೊಂಡರೆ ದೋಷವಿಲ್ಲ. ಮದುವೆ ಅಥವಾ ದೊಡ್ಡ ಸಮಾರಂಭಗಳಲ್ಲಿ ಮಧುಪರ್ಕ ಒಂದೇ ಪಾತ್ರೆಯಿಂದ ಎಲ್ಲರಿಗೆ ನೀಡುತ್ತಿದ್ದರೂ ಅಲ್ಲೂ ದೋಷವಿಲ್ಲ. ಸೋಮಯಾಗದ ಕಾಲದಲ್ಲಿ ಸೋಮರಸಪಾನ ಏಕಪಾತ್ರದಿಂದಲೇ ಋತ್ವಿಜರಿಗೆ ವಿಹಿತವಾದ ಕಾರಣ ಅಲ್ಲೂ ಉಚ್ಛಿಷ್ಟ ದೋಷ ಇಲ್ಲ.  ಉಳಿದ ಸಂದರ್ಭದಲ್ಲಿ ಎಂಜಲು ದೊಡ್ಡ ದೋಷಕ್ಕೆ ಕಾರಣ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩