ಧರ್ಮಾಚರಣೆ ೩೬
ಧರ್ಮಾಚರಣೆ---೩೬
ಸುಕ್ಷೇತ್ರೇ ವಾಪಯೇತ್ ಬೀಜಂ ಸುಪಾತ್ರೇ ನಿಕ್ಷಿಪೇದ್ಧನಮ್ | ಸುಕ್ಷೇತ್ರೇ ಚ ಸುಪಾತ್ರೇ ಚ ಹ್ಯುಪ್ತಂ ದತ್ತಂ ನ ನಶ್ಯತಿ || ಪರಾಶರ ಸ್ಮೃತಿ||
ಗಿಡ ನೆಡುವಾಗ ಮಣ್ಣು ಒಳ್ಳೆಯದಿದೆಯೋ, ಬಿಸಿಲು ಹೇಗಿದೆ, ನೀರು ನಿಲ್ಲದ ಪ್ರದೇಶವೋ ( ಭತ್ತ ಮೊದಲಾದವು ಬಿಟ್ಟು) ಇತ್ಯಾದಿ ಯೋಚಿಸಿ ನೆಟ್ಟಾಗ ಆ ಗಿಡ ಮರವಾಗಿ ಬಹುಕಾಲ ಫಲಕೊಡುತ್ತದೆ. ಅಂತೆಯೇ ದಾನ ಮಾಡುವಾಗ ಪಾತ್ರಾಪಾತ್ರ ವಿವೇಚನೆ ಮಾಡಿ ಕೊಡಬೇಕು. ನಮ್ಮ ಬಂಧುಗಳು, ಮಿತ್ರರು, ಪರಿಚಿತರು, ಗುರುಗಳ ಬಂಧುಗಳು ಇತ್ಯಾದಿ ವಿಚಾರ ಮಾಡದೇ ವ್ಯಕ್ತಿಯಲ್ಲಿ ದಾನ ತೆಗೆದುಕೊಳ್ಳುವ ಯೋಗ್ಯತೆ ಎಷ್ಟಿದೆ? ಅದನ್ನು ಜೀರ್ಣಿಸಿಕೊಳ್ಳಲು ಏನಾದರೂ ಸಾಧನೆ ಮಾಡುವನೋ ಎಂಬುದನ್ನು ವಿಚಾರ ಮಾಡಿ ಕೊಟ್ಟಾಗ ಮಾತ್ರ ಬಹುಫಲದಾಯಕ. ಇಲ್ಲದಿದ್ದರೆ ಅರಣ್ಯ ಇಲಾಖೆಯವರ ವನಮಹೋತ್ಸವದ ಗಿಡದಂತೆ ನಾವು ಕೊಟ್ಟ ದಾನದ ಫಲವು ಕ್ಷಣದಲ್ಲೇ ನಾಶವಾಗುವುದು. ಇವೆರಡರ ನಿವೇಶ ಬಹು ಮುಖ್ಯವಾದುದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ