ಧರ್ಮಾಚರಣೆ ೫೪

ಧರ್ಮಾಚರಣೆ-೫೪

ಚಾತುರ್ವರ್ಣ್ಯಸ್ಯ ನಾರೀಣಾಂ ಕೃಚ್ಛ್ರಂ ಚಾಂದ್ರಾಯಣಂ ವ್ರತಮ್ | ಯಥಾ ಭೂಮಿಸ್ತಥಾ ನಾರೀ ತಸ್ಮಾತ್ತಾಂ ನ ತು ದೂಷಯೇತ್ || ಪರಾಶರ ಸ್ಮೃತಿ||


ಯಾವುದೇ ವರ್ಣದ ಸ್ತ್ರೀಯರು ಎಂತಹ ಪಾಪ ಮಾಡಿದರೂ ಅವರಿಗೆ ತುಂಬಾ ದೊಡ್ಡ ಪ್ರಾಯಶ್ಚಿತ್ತ ಅಥವಾ ಶಿಕ್ಷೆ ಎಂದರೆ ಅದು ದಿನಕ್ಕೊಂದು ತುತ್ತು ಹೆಚ್ಚಿಸಿ- ಕಡಿಮೆ ಮಾಡುತ್ತಾ ಒಂದು ದಿನ ಉಪವಾಸ ಇರುವ ಚಾಂದ್ರಾಯಣ ವ್ರತ ಮಾತ್ರ. ಅದಕ್ಕೆ ಮಿಗಿಲಾಗಿ ಯಾವ ಸ್ತ್ರೀಯನ್ನೂ ಶಿಕ್ಷಿಸಬಾರದು. ಏಕೆಂದರೆ ನಮ್ಮ ಪ್ರಜಾಸಂತತಿ ಬೆಳೆಯಲು ಮುಖ್ಯ ಕಾರಣ ಸ್ತ್ರೀ. ಹಾಗಾಗಿ ಧಾನ್ಯ- ಶಾಕ- ಫಲಗಳ ಉತ್ಪತ್ತಿಗೆ ಆಧಾರವಾದ ಭೂಮಿಯನ್ನು ಹೇಗೆ ಜತನದಿಂದ ರಕ್ಷಿಸುವೆವೋ ಅದರಂತೆ ನಮ್ಮ ಸ್ತ್ರೀಯರನ್ನೂ ರಕ್ಷಿಸಬೇಕು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩