ಧರ್ಮಾಚರಣೆ ೪೬

   ಧರ್ಮಾಚರಣೆ ----೪೬

ಯಸ್ಯ ನ ದ್ವಿಗುಣಂ ದಾನಂ ಕೇಶಶ್ಚ ಪರಿರಕ್ಷಿತಃ | ತತ್ಪಾಪಂ ತಸ್ಯ ತಿಷ್ಠೇತ ತ್ಯಕ್ತ್ವಾ ಚ ನರಕಂ ವ್ರಜೇತ್ ||  
ಯತ್ಕಿಂಚಿತ್ ಕ್ರಿಯತೇ ಪಾಪಂ ಸರ್ವಂ ಕೇಶೇಷು ತಿಷ್ಠತಿ | ಸರ್ವಾನ್ಕೇಶಾನ್ಸಮುದ್ಧೃತ್ಯ ಛೇದಯೇದಂಗುಲಿದ್ವಯಮ್ ||
ಪರಾಶರ ಸ್ಮೃತಿ||


ಅಕಾರಣವಾಗಿ ಬಹುದಿನಗಳ ಕಾಲ ಯಾರೂ ಕೂದಲನ್ನು ಉಳಿಸಿಕೊಳ್ಳಬಾರದು. ( ವ್ರತ, ದೀಕ್ಷೆ ಬಿಟ್ಟು) ಒಂದು ವೇಳೆ ಹಾಗೆ ಉಳಿಸಿಕೊಂಡರೆ ದ್ವಿಗುಣ ದಾನವನ್ನು ನೀಡಬೇಕಾಗುವುದು. ಹಾಗೆ ಕೊಡದಿದ್ದರೆ ನರಕಗಾಮಿಯಾಗುವರು. ಹಾಗಾಗಿ ಸಿನೆಮಾ ಅಥವಾ ಕ್ರೀಡಾಳುಗಳನ್ನು ಅನುಸರಿಸಿ ಬಹುಕಾಲ ಪುರುಷರು ಕೇಶವನ್ನು ಬಿಡುವುದು ಸರಿಯಲ್ಲ. ನಾವು ಸಣ್ಣ ಪಾಪ ಮಾಡಿದರೂ ಅದು ಕೂದಲಿನಲ್ಲಿ ನೆಲೆಸುವುದು. ಹಾಗಾಗಿ ಅಂತಹ ಪ್ರಸಂಗದಲ್ಲಿ ಎರಡು ಅಂಗುಲದಷ್ಟಾದರೂ ಕೂದಲನ್ನು ಕತ್ತರಿಸಬೇಕು. ಈ ಕಾರಣಗಳಿಂದಲೇ ಹಿಂದಿನವರು ಹೇಳುತ್ತಿದ್ದುದು - ಕೂದಲು, ಉಗುರು ಬಹುಕಾಲ ಬಿಡದೇ ಬೆಳೆದಂತೆ ಕತ್ತರಿಸಬೇಕು. ಮನೆಯ ಹತ್ತಿರ ಬಿಸಾಡದೇ ದೂರದಲ್ಲಿ ಗಿಡದ ಕೆಳಗೆ ಅಥವಾ ಯಾರೂ ತುಳಿಯದ ಜಾಗದಲ್ಲಿ ವಿಸರ್ಜಿಸಬೇಕು ಎಂಬುದಾಗಿ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩