ಧರ್ಮಾಚರಣೆ ೩೨
ಧರ್ಮಾಚರಣೆ-೩೨
ಧರ್ಮಃ ಶ್ರೇಯಸ್ಸಮುದ್ದಿಷ್ಟಂ ಶ್ರೇಯೋಭ್ಯುದಯಲಕ್ಷಣಮ್| ಅಸ್ಯ ಸಮ್ಯಗನುಷ್ಠಾನಾತ್ ಸ್ವರ್ಗೋ ಮೋಕ್ಷಶ್ಚ ಜಾಯತೇ|| ಭವಿಷ್ಯ ಪುರಾಣ||
ಮಾನವನ ಬದುಕಿನಲ್ಲಿ ಧರ್ಮದ ಆಚರಣೆಗೆ ತುಂಬಾ ಮಹತ್ವ ಇದೆ. ಆಧುನಿಕರನೇಕರ ಪ್ರಶ್ನೆ- ಧರ್ಮಾಚರಣೆಯಿಂದ ಏನು ಪ್ರಯೋಜನ? ಅದಕ್ಕುತ್ತರ ಇಲ್ಲಿದೆ- ಧರ್ಮವೇ ಅತ್ಯಂತ ಪ್ರಶಸ್ತವಾದುದು. ಶ್ರೇಯಸ್ಕರ ಎಂದರೆ ಪ್ರಶಸ್ತ ಅಥವಾ ಉತ್ತಮಮಾರ್ಗ ಎಂದರ್ಥ. ನಮ್ಮ ಬದುಕಿನಲ್ಲಿ ಉತ್ತಮ ಮಾರ್ಗದೆಡೆಗಿನ ನಡೆಯೇ ಉದ್ಧಾರಕಾರಣ. ಇಂತಹ ಸನ್ಮಾರ್ಗದಲ್ಲಿ ಸಾಗುವುದೇ ಕಾಮನೆ ಹೊಂದಿದವನಿಗೆ ಸ್ವರ್ಗವನ್ನು, ನಿಷ್ಕಾಮನಿಗೆ ಮೋಕ್ಷವನ್ನೂ ತಂದುಕೊಡುತ್ತದೆ. ಸನ್ಮಾರ್ಗದ ನಡೆ, ಸಜ್ಜನಿಕೆಯ ಅನುಷ್ಠಾನ ಎಂದೂ ವ್ಯರ್ಥವಲ್ಲ. ಅದು ಆತ್ಮ ಎಷ್ಟು ದೂರ ಕ್ರಮಿಸುವುದೋ ಅಲ್ಲಿಯವರೆಗೂ ಫಲ ಕೊಡುತ್ತಲೇ ಇರುತ್ತದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ