ಧರ್ಮಾಚರಣೆ ೩೧

      ಧರ್ಮಾಚರಣೆ ---೩೧

ವಿಹಿತಸ್ಯ ಅನನುಷ್ಠಾನಾತ್ ನಿಂದಿತಸ್ಯ ಚ ಸೇವನಾತ್ | ಅನಿಗ್ರಹಾಚ್ಛೇಂದ್ರಿಯಾಣಾಂ ನರಃ ಪತನಮೃಚ್ಛತಿ || ಯಾಜ್ಞವಲ್ಕ್ಯ ಸ್ಮೃತಿ||

ಜನರು ತಮ್ಮ ವರ್ಣಕ್ಕೆ ವಿಹಿತವಾದ ಕರ್ಮಗಳನ್ನು ಲೋಪವಿಲ್ಲದೆ ಮಾಡಬೇಕು. ಹಾಗೆ ಮಾಡದಿದ್ದರೆ ದೋಷವಿದೆ. ಉ- ಸಂಧ್ಯಾ, ಪೂಜೆ, ದಾನ, ಅಧ್ಯಯನ ಮೊದಲಾದವನ್ನು ಬ್ರಾಹ್ಮಣನು ಆಚರಿಸದಿದ್ದರೆ ದೋಷ ಕಂಡುಬರುವುದು. ಇನ್ನು ನಿಂದಿತ ಕರ್ಮಗಳನ್ನು ಆಚರಿಸುವುದು ಸರ್ವರಿಗೂ ದೋಷಕಾರಕ. ಉ- ಆರರ ಮೇಲೂ ಏಳದಿರುವುದು, ಸ್ನಾನಾದಿಗಳನ್ನು ದಿನವೂ ಮಾಡದಿರುವುದು, ಕುಡಿತ- ಅಮಲು ಸೇವನೆ- ಪರಸ್ತ್ರೀ ಆಕರ್ಷಣೆ ಇತ್ಯಾದಿ. ಮೂರನೆಯದು ಇಂದ್ರಿಯಗಳ ನಿಗ್ರಹ. ಪಂಚ ಕರ್ಮ ಹಾಗೂ ಪಂಚ ಜ್ಞಾನೇಂದ್ರಿಯಗಳ ನಿಗ್ರಹವು ಅವಶ್ಯಕ. ನಾಲಿಗೆ ಚಪಲ- ಮಾತು ಹಾಗೂ ತಿನ್ನುವುದರಲ್ಲಿ, ಕಲಹ- ಅಪಘಾತ-ಅನಾಚಾರಗಳನ್ನು ನೋಡುವ ಚಪಲ ಕಣ್ಣಿಗೆ, ಬೇರೊಬ್ಬರ ಗುಟ್ಟನ್ನು ಕೇಳುವ ಅಥವಾ ಅಶ್ಲೀಲ ಮಾತು ಕೇಳುವ ಚಪಲ ಕಿವಿಗೆ, ಎಲ್ಲಾ ಬಗೆಯ ವಾಸನೆ ಸ್ವೀಕರಿಸುವ ಚಪಲ ಮೂಗಿಗೆ, ಸಿಕ್ಕಿದ್ದನ್ನೆಲ್ಲ ಸ್ಪರ್ಶಿಸುವ ತವಕ ಚರ್ಮಕ್ಕೆ ಹೀಗೆ ಇಂದ್ರಿಯ ನಿಗ್ರಹ ಬಲು ಕಷ್ಟ. ಇವುಗಳ ನಿಗ್ರಹವು ಮಾನವನ ಪತನವನ್ನು ತಡೆಯುತ್ತದೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩