ಧರ್ಮಾಚರಣೆ ೩೭

    ಧರ್ಮಾಚರಣೆ----೩೭

ಯೋ ವೇಷ್ಟಿತಶಿರಾಭುಂಕ್ತೇ ಯೋ ಭುಂಕ್ತೇ ದಕ್ಷಿಣಾಮುಖಮ್ | ವಾಮಪಾದಕರಃ ಸ್ಥಿತ್ವಾ ತದ್ವೈರಕ್ಷಾಂಸಿ ಭುಂಜತೇ || ಪರಾಶರ ಸ್ಮೃತಿ|| 

ತಲೆಗೆ ಮುಂಡಾಸು ಅಥವಾ ಉತ್ತರೀಯವನ್ನು ಕಟ್ಟಿಕೊಂಡು ಊಟ ಮಾಡಬಾರದು. ದಕ್ಷಿಣ ದಿಕ್ಕಿಗೆ ಮುಖಮಾಡಿ ಉಣ್ಣಬಾರದು. ಹೇಗೆ ಉತ್ತರಕ್ಕೆ ತಲೆ ಹಾಕಿ ನಿದ್ರಿಸಬಾರದೋ ಅಂತೆಯೇ ದಕ್ಷಿಣಕ್ಕೆ ಮುಖ ಮಾಡಿ ಉಣ್ಣಬಾರದು. ಎಡಕಾಲ ಮೇಲೆ ಕೈ ಊರಿ  ಊಟ ಮಾಡಬಾರದು. ಊಟ ಮಾಡುವಾಗ ಎಲೆಯಲ್ಲಾದರೆ ಎಡಗೈ ಎಲೆ ತುದಿಗೆ ಇಟ್ಟುಕೊಳ್ಳಬೇಕು, ತಟ್ಟೆಯಲ್ಲಾದರೆ ಹಾಗೆ ಆಗದಿದ್ದರೂ ಎಡಗಾಲ ಮೇಲೆ ಇಡಬಾರದು. ಬೇಕಾದರೆ ಹೃದಯವನ್ನು ಸ್ಪರ್ಶಿಸಿ ಭಗವಂತನನ್ನು ಚಿಂತಿಸುತ್ತಾ ಉಣ್ಣಬಹುದು. ಈ ಮೂರು ನಿಯಮ ಅಚರಿಸದಿದ್ದರೆ ನಾವು ತಿಂದ ಅನ್ನ ರಾಕ್ಷಸರ ಪಾಲಾಗಿ ರಾಕ್ಷಸರ ಗುಣಗಳಾದ ಕ್ರೋಧ-ಅತಿಕಾಮ-ಅತಿನಿದ್ರೆ- ಲಾಲಸೆ ಮೊದಲಾದವು ಒಡಮೂಡುತ್ತವೆ. ಹಾಗಾಗಿ ಊಟವನ್ನು ಹೇಗೆ ಬೇಕಾದರೂ ಮಾಡಿದರೆ ಬದುಕೂ ದಾರಿತಪ್ಪುತ್ತದೆ.

 ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩