ಧರ್ಮಾಚರಣೆ ೩೪

ಧರ್ಮಾಚರಣೆ-೩೪

ನೈಕಗ್ರಾಮೀಣಮತಿಥಿಂ ಸಂಗೃಹ್ಣೀತ ಕದಾಚನ | ಅನಿತ್ಯಮಾಗತೋ ಯಸ್ಮಾತ್ತಸ್ಮಾದತಿಥಿರುಚ್ಯತೇ|| ಪರಾಶರ ಸ್ಮೃತಿ||

ಒಂದೇ ಗ್ರಾಮದ ಮನೆಯವರು ಎಂದಿಗೂ ಅತಿಥಿಗಳಲ್ಲ. ದೂರದಿಂದ ಬಂದಿದ್ದರೆ ಮಾತ್ರ ಅತಿಥಿ. ತನ್ನ ಮನೆಯಲ್ಲೇ ಅನುಕೂಲ ಇರುವಾಗ ಬೇರೆ ಕಡೆ ಆತಿಥ್ಯ ಬಯಸಿ ಹೋಗುವುದು ಪಾಪಕರ. ನಿತ್ಯ ಮನೆಗೆ ಬರುತ್ತಿದ್ದರೆ ಅವರೂ ಅತಿಥಿಗಳಲ್ಲ. ಅವರೆಲ್ಲರೂ ಅಭ್ಯಾಗತರು. ಹೇಳದೇ ಆಕಸ್ಮಿಕವಾಗಿ ಭೋಜನದ ಹೊತ್ತಲ್ಲಿ ಬಳಲಿ ಬಂದರೆ ಅವರು ನಿಜವಾದ ಅತಿಥಿ. ಹಾಗಾಗಿ ಅತಿಥಿ ಸತ್ಕಾರವೆಂದು ಪಕ್ಕದಮನೆಯವರನ್ನು, ಬಂಧುಗಳನ್ನು, ಮಿತ್ರರನ್ನು ಕರೆಯುವುದಲ್ಲ. ಅದು ಮಿತ್ರ- ಬಂಧು ಭೋಜನ. ಎಲ್ಲಿಂದಲೋ ನಮಗೆ ಅರಿವಿಲ್ಲದೆ ಬರುವವರು ಅತಿಥಿಗಳು. ಅಂತಹವರ ಆತಿಥ್ಯವು ದೇವಪ್ರೀತಿಕರ. ಇಹಪರ ಫಲದಾಯಕ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩