ಧರ್ಮಾಚರಣೆ ೫೩

   ಧರ್ಮಾಚರಣೆ-೫೩

ಡಾಮರೇ ಸಮರೇ ವಾಪಿ ದುರ್ಭಿಕ್ಷೇ ವಾ ಜನಕ್ಷಯೇ | ವಂದಿಗ್ರಾಹೇ ಭಯಾರ್ತೋ ವಾ ಸದಾ ಸ್ವಸ್ತ್ರೀಂ ನಿರೀಕ್ಷಯೇತ್ || ಪರಾಶರ ಸ್ಮೃತಿ||

ಸ್ತ್ರೀಯರ ವಿಷಯದಲ್ಲಿ ನಮ್ಮ ಸ್ಮೃತಿಗಳು ಎಷ್ಟು ಉತ್ತಮ ಭಾವನೆ- ಗೌರವ ತೋರಿದ್ದಾವೆ ಎನ್ನುವುದಕ್ಕೆ ಈ ಮಾತು ಉತ್ತಮ ಉದಾಹರಣೆ. ಎಲ್ಲೋ ದೊಡ್ಡ ಮಟ್ಟದಲ್ಲಿ ದೊಂಬಿ ನಡೆದಾಗ, ಯುದ್ಧದ ಸಮಯದಲ್ಲಿ, ಕ್ಷಾಮದ ಕಾಲದಲ್ಲಿ, ಸ್ತ್ರೀ ಜನಸಂಖ್ಯೆ ತುಂಬಾ ಕಡಿಮೆ ಇದ್ದಾಗ, ಸೆರೆಯಾಳುಗಳಾಗಿದ್ದಾಗ, ತುಂಬಾ ಹೆದರಿಕೆಯಿಂದ ಕೂಡಿ ಸ್ತ್ರೀಯರು ಅತ್ಯಾಚಾರ ಅಥವಾ ಶೋಷಣೆಗೊಳಗಾಗುವ ಸಂಭವವಿದ್ದಾಗ ಅಥವಾ ಅಂತಹ ದುರ್ಘಟನೆ ನಡೆದಾಗ  ಪತಿಯು ಅವಳನ್ನು ಶಿಕ್ಷಿಸದೇ ಸಮಾಧಾನಿಸಿ  ಅವಳನ್ನು ಪರಿಗ್ರಹಿಸಬೇಕು. ಅಂತಹ ಸಮಯದಲ್ಲಿ ಅವಳು ತನ್ನನ್ನು ರಕ್ಷಿಸಿಕೊಳ್ಳಲು ಅಸಮರ್ಥಳಾಗಿರುತ್ತಾಳೆ. ಪತಿಯು ರಕ್ಷಿಸದಿದ್ದಾಗ ಆದ ಅನಾಹುತಕ್ಕೆ ಅವಳನ್ನು ದೂಷಿಸದೇ ಸ್ತ್ರೀಯ ವಿಷಯದಲ್ಲಿ ಉದಾರತೆಯನ್ನು ತೋರಿಸಬೇಕು. ಇದೇ ಸನಾತನ ಧರ್ಮದ ಶ್ರೇಷ್ಠತೆ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩