ಧರ್ಮಾಚರಣೆ ೨೮
ಧರ್ಮಾಚರಣೆ - ೨೮
ಧರ್ಮಂ ಜಿಜ್ಞಾಸಮಾನಾನಾಂ ಪ್ರಮಾಣಂ ಪರಮಂ ಶ್ರುತಿಃ | ದ್ವಿತೀಯಂ ಧರ್ಮಶಾಸ್ತ್ರಾಣಿ ತೃತೀಯಂ ಲೋಕಸಂಗ್ರಹಃ || ಮಹಾಭಾರತ- ಅಶ್ವಮೇಧಿಕ ಪರ್ವ ||
ಧರ್ಮದ ವಿಷಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಸಂಶಯ ಬಂದಾಗ ಮೊದಲಾಗಿ ವೇದವು ಪರಮಪ್ರಮಾಣ. ವೇದಾನುಸಾರಿ ಕಲ್ಪ ಗೃಹ್ಯಸೂತ್ರಗಳೂ ಪ್ರಮಾಣ. ಒಂದು ವೇಳೆ ವೇದೋಕ್ತವಲ್ಲದ ಪಕ್ಷದಲ್ಲಿ ಧರ್ಮಶಾಸ್ತ್ರವು ಪ್ರಮಾಣ. ವಸಿಷ್ಠ, ಪರಾಶರ, ಮನು, ಹಾರೀತ, ಶಂಖ ಮೊದಲಾದ ಸ್ಮೃತಿ ಆಧರಿಸಿದ ಧರ್ಮಶಾಸ್ತ್ರವು ಪ್ರಮಾಣ. ಅದರಲ್ಲೂ ಇಲ್ಲದ ಪಕ್ಷದಲ್ಲಿ ಆಗ ಹಿರಿಯರ ಅದರಲ್ಲೂ ಸಜ್ಜನರ ಆಚರಣೆಗಳು ನಮಗೆ ಮಾರ್ಗದರ್ಶಕ. ಯಾವುದೂ ಇಲ್ಲವೆಂದು ಧರ್ಮದ ಆಚರಣೆಗಳನ್ನು ಬಿಡುವಂತಿಲ್ಲ. ಹಾಗೆಂದು ಶ್ರುತಿ ಸ್ಮೃತಿ ವಿರೋಧ ಇದ್ದಾಗಲೂ ನಮ್ಮ ಮನೆಯಲ್ಲಿ ಹೀಗೆ, ನಮ್ಮ ಆಚಾರ್ಯರು ಅಥವಾ ಗುರುಗಳು ಹೀಗೆ ಹೇಳಿದ್ದಾರೆ, ನಮ್ಮ ಪರಂಪರೆ ಅಥವಾ ಪ್ರದೇಶದಲ್ಲಿ ಹೀಗೆ ಎಂದು ಮೌಢ್ಯವನ್ನು ಅನುಸರಿಸಬಾರದು. ಹಿಂದೆ ಧರ್ಮಶಾಸ್ತ್ರದ, ವೇದದ ವ್ಯಾಖ್ಯಾನಗಳು ಪುಸ್ತಕಗಳು ಅನೇಕ ಕಡೆ ಅಲಭ್ಯವಿದ್ದವು. ಆಗ ಆಚರಣೆಗೆ ಒಂದು ನಿಯಮ ತಂದಿರಬಹುದು ಅಷ್ಟೇ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ