ಧರ್ಮಾಚರಣೆ ೫೦
ಧರ್ಮಾಚರಣೆ ---೫೦
ಹತೇ ತು ರುಧಿರಂ ದೃಶ್ಯಂ ವ್ಯಾಧಿಗ್ರಸ್ತಃ ಕೃಶೋ ಭವೇತ್ | ಲಾಲಾ ಭವತಿ ದಷ್ಟೇಷು ಏವಮನ್ವೇಷಣಂ ಭವೇತ್ || ಪರಾಶರ ಸ್ಮೃತಿ||
ಧರ್ಮಕಾರ್ಯಗಳನ್ನು ಮಾಡುವಾಗ ದೇಹವು ಸ್ವಸ್ಥವಾಗಿರುವುದು ಅತ್ಯಂತ ಅವಶ್ಯಕವಾದ ವಿಷಯ. ಏಕೆಂದರೆ ಶರೀರಮಾದ್ಯಂ ಖಲು ಧರ್ಮಸಾಧನಮ್ ಎಂಬಂತೆ ಶರೀರ ಸರಿಯಾಗಿದ್ದರೆ ಎಲ್ಲಾ ಆಚರಣೆ. ಗಾಯಗಳಾದಾಗ ರಕ್ತಸ್ರಾವದಿಂದಾಗಿ ಗುರುತಿಸಿ ಉಪಚಾರ ಔಷಧ ಪಡೆಯಬೇಕು. ರಕ್ತಸುರಿಯುತ್ತಿದ್ದಾಗ ಯಾವ ಕಾರ್ಯವೂ ತರವಲ್ಲ. ದೊಡ್ಡ ರೋಗದಿಂದ ಪೀಡಿತರಾದಾಗ ವ್ಯಕ್ತಿ ಕೃಶನಾಗವನು. ಅಂತಹ ಸಮಯದಲ್ಲೂ ಯಾವ ಕರ್ಮಗಳನ್ನು ಮಾಡದೇ ವಿಶ್ರಾಂತಿ ಪಡೆದು ರೋಗಪರಿಹಾರಕ್ಕೆ ಯತ್ನಿಸಬೇಕು. ಸರ್ಪ- ಶ್ವಾನ- ಕರ್ಕಾಟಕ ಮೊದಲಾದ ದುಷ್ಟ ಜಂತುಗಳು ಕಡಿದಾಗ ಅವುಗಳ ಜೊಲ್ಲಿನಿಂದ ಗುರುತಿಸಿ ಕೂಡಲೇ ಪರಿಹಾರ ಕೈಗೊಳ್ಳಬೇಕು, ಇಲ್ಲದಿದ್ದರೆ ಅದೇ ಪ್ರಾಣಾಂತಿಕವಾಗಬಹುದು. ಹಾಗಾಗಿ ಗಾಯವನ್ನು- ರೋಗವನ್ನು- ಕಡಿತವನ್ನು ಅನ್ವೇಷಿಸಿ ಪರಿಹಾರ ಪಡೆದು ಕರ್ಮಗಳನ್ನು ಮಾಡುವುದೇ ಶಾಸ್ತ್ರ ವಿಹಿತ. ಸುಮ್ಮನೆ ದೇಹವನ್ನು ಹಾಳುಮಾಡಿಕೊಂಡು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದು ಸದಾ ಶಾಸ್ತ್ರ ನಿಷಿದ್ಧ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ