ಧರ್ಮಾಚರಣೆ ೪೮
ಧರ್ಮಾಚರಣೆ--೪೮
ಗಾಯತ್ರೀ ರಹಿತೋ ವಿಪ್ರಃ ಶೂದ್ರಾದಪ್ಯಶುಚಿರ್ಭವೇತ್ | ಗಾಯತ್ರೀ ಬ್ರಹ್ಮ ತತ್ವಜ್ಞಾಃ ಸಂಪೂಜ್ಯಂತೇ ಜನೈರ್ದ್ವಿಜಾಃ ||
ಪರಾಶರ ಸ್ಮೃತಿ ||
ಬ್ರಾಹ್ಮಣ ಎಂದು ಕರೆಸಿಕೊಳ್ಳುವ ಮನುಷ್ಯನು ಅವಶ್ಯವಾಗಿ ಎರಡು ಹೊತ್ತು ಗಾಯತ್ರೀ ಮಂತ್ರವನ್ನು ಜಪಿಸಬೇಕು. ಹಾಗಿಲ್ಲದೆ ಇದ್ದಲ್ಲಿ ಅವನು ಉಳಿದವರಿಗಿಂತಲೂ ಅಶುಚಿ ಎಂದು ಕರೆಸಿಕೊಳ್ಳುತ್ತಾನೆ. ಗಾಯತ್ರಿ ಮಂತ್ರಪಠನ ಹಾಗೂ ದೇವರ ಅನುಸಂಧಾನವೇ ಶುದ್ಧತೆಗೆ ಮುಖ್ಯ ಕಾರಣ. ಸ್ನಾನ, ವಸ್ತ್ರ, ನೀರು ಮೊದಲಾದವು ನಂತರದ ವಿಷಯಗಳು. ಗಾಯತ್ರೀ ಮಂತ್ರ ದಿನವೂ ಜಪಿಸುತ್ತಾ ಬ್ರಹ್ಮತತ್ವವನ್ನು ಯಾರು ಚಿಂತಿಸುವರೋ ಅಂತಹವರು ಎರಡನೇ ಜನ್ಮ ಪಡೆದು ಅಂದರೆ ಶುದ್ಧರಾಗಿ ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ. ಹಾಗಾಗಿ ಹುಟ್ಟು ಮಾತ್ರ ಬ್ರಾಹ್ಮಣ್ಯಕ್ಕೆ ಕಾರಣವಲ್ಲ. ಅವರ ಕರ್ತೃತ್ವವೇ ಮುಖ್ಯ ಕಾರಣ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ