ಧರ್ಮಾಚರಣೆ ೩೮
ಧರ್ಮಾಚರಣೆ-೩೮
ಕಂಡನೀ ಪೇಷಣೀ ಚುಲ್ಲೀ ಉದಕುಂಭೀ ಚ ಮಾರ್ಜನೀ | ಪಂಚಸೂನಾ ಗೃಹಸ್ಥಸ್ಯ ಅಹನ್ಯಹನಿ ವರ್ತತೇ|| ಪರಾಶರ ಸ್ಮೃತಿ||
ಅಕ್ಕಿಯನ್ನು ಅಥವಾ ಧಾನ್ಯಗಳನ್ನು ಒನಕೆಯಿಂದ ಅಥವಾ ಯಂತ್ರಗಳ ಮೂಲಕ ಹೊಟ್ಟು ಬೇರ್ಪಡಿಸುವಿಕೆ, ಅರೆಯುವ ಕಲ್ಲು- ಮಿಕ್ಸಿ ಅಥವಾ ದೊಡ್ಡ ಯಂತ್ರಗಳಿಂದ ಅಡಿಗೆ ಪದಾರ್ಥಗಳನ್ನು ಪುಡಿ ಮಾಡುವುದು, ಬೆಂಕಿಯಲ್ಲಿ ಬೇಯಿಸುವುದು, ನೀರು ಕೊಡಪಾನದಲ್ಲಿ ಅಥವಾ ನಲ್ಲಿಗಳ ಮೂಲಕ ಬಂದಾಗ, ನೀರನ್ನು ಸ್ವಚ್ಛ ಮಾಡಲೆಂದು ಮನೆ ಎದುರಿಗೆ ಅಥವಾ ಎಲ್ಲಾದರೂ ಸಿಂಪಡಿಸಿದಾಗ ಅನೇಕ ಸೂಕ್ಷ್ಮ ಜೀವಿಗಳ ಹಾನಿಯಾಗುತ್ತದೆ. ಭಗವಂತನ ಸೃಷ್ಟಿಯಲ್ಲಿ ನಮಗೆ ಹಾನಿ ಮಾಡುವ ಅಧಿಕಾರ ಎಳ್ಳಷ್ಟೂ ಇಲ್ಲ. ಇದರ ಪ್ರಾಯಶ್ಚಿತ್ತ ಎಂದು ಪಂಚಮಹಾಯಜ್ಞಗಳನ್ನು ವಿಧಾನ ಮಾಡಿದ್ದಾರೆ. ಸ್ವಾಧ್ಯಾಯ, ದೇವಪೂಜೆ, ಪಿತೃಗಳ ಸ್ಮರಣೆ, ಭೂತ- ಕಾಕ ಮೊದಲಾದವುಗಳಿಗೆ ಬಲಿ, ಅತಿಥಿ ಸತ್ಕಾರ ಇವುಗಳಿಂದ ದಿನವೂ ಮಾಡುವ ಪಾಪಗಳಿಂದ ಮುಕ್ತನಾಗುವನು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ