ಧರ್ಮಾಚರಣೆ ೩೩
ಧರ್ಮಾಚರಣೆ--- ೩೩
ಇಷ್ಟೋ ವಾ ಯದಿ ವಾ ದ್ವೇಷ್ಯೋ ಮೂರ್ಖಃ ಪಂಡಿತ ಏವ ವಾ | ಸಂಪ್ರಾಪ್ತೋ ವೈಶ್ವದೇವಾಂತೇ ಸೋತಿಥಿಃ ಸ್ವರ್ಗ ಸಂಕ್ರಮಃ || ಪರಾಶರ ಸ್ಮೃತಿ||
ಊಟದ ಸಮಯಕ್ಕೆ ಬಂದ ಅತಿಥಿಗೆ ಎಂದೂ ಅನ್ನ ನಿರಾಕರಿಸಬಾರದು. ಬಂಧು-ಮಿತ್ರರಾಗಲಿ, ಶತ್ರುವಾಗಲಿ, ಮೂರ್ಖನಾಗಲಿ- ಪಂಡಿತನಾಗಲಿ ಯಾವ ವರ್ಣ- ಧರ್ಮದವರಾದರೂ ವೈಶ್ವದೇವ ಮಾಡಿ ಕೆಲವು ಕ್ಷಣ ಕಾದು ಬಂದರೆ ಊಟ ಬಡಿಸಿ ನಂತರ ತಾನು ಉಣ್ಣಬೇಕು. ಅಂತಹ ಸಮಯದ ಅತಿಥಿಯು ಸ್ವರ್ಗವನ್ನೇ ನಮ್ಮ ಪಾಲಿಗೆ ಕರುಣಿಸುತ್ತಾನೆ. ಕರೆಯದೇ ಬಂದ ಅಂತಹ ವ್ಯಕ್ತಿಯಲ್ಲಿ ಭಗವಂತನ ಸಾನ್ನಿಧ್ಯ ಇರುವ ಕಾರಣ ಮಡಿ- ಮೈಲಿಗೆ ಹೆಚ್ಚೇನೂ ವಿಚಾರಿಸದೆ ಅನ್ನ ಕೊಡಬೇಕು. ಹಿಂದೂ ಧರ್ಮದ ಅನ್ನದಾನದ ಶ್ರೇಷ್ಠ ಪರಂಪರೆ ಇದೇ ಆಗಿದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ