ಧರ್ಮಾಚರಣೆ ೪೦

    ಧರ್ಮಾಚರಣೆ- ೪೦

ಚರೇತ್ಸಾಂತಪನಂ ವಿಪ್ರಃ ಪ್ರಾಜಾಪತ್ಯಮನಂತರಮ್| ತದರ್ಧಂ‌ಚ ಚರೇದ್ವೈಶ್ಯಃ ಪಾದಂ ಶೂದ್ರಸ್ಯ ದಾಪಯೇತ್ || ಪರಾಶರ ಸ್ಮೃತಿ||

ನಮ್ಮ ಧರ್ಮಶಾಸ್ತ್ರಗಳು ಬ್ರಾಹ್ಮಣರಿಗೆ ಅವಕಾಶ ಕೊಟ್ಟಷ್ಟೇ ರೀತಿಯಲ್ಲಿ ತಪ್ಪಿಗೆ ಹೆಚ್ಚಿನ ಶಿಕ್ಷೆಯನ್ನೂ ವಿಧಿಸಿವೆ. ಏಕೆಂದರೆ ಮಾರ್ಗದರ್ಶಕನೇ ತಪ್ಪೆಸಗಿದರೆ ಉಳಿದವರ ಕಥೆ ಏನು ಎಂಬ ಜಾಗೃತೆಯಲ್ಲಿ. ಬ್ರಾಹ್ಮಣನು ಅಕಸ್ಮಾತ್ ಪ್ರಾಣಿವಧೆ ಮಾಡಿದರೆ ಅವನಿಗೆ ಒಂದು ದಿನ ಪಂಚಗವ್ಯ ಮಾತ್ರ ತೀರ್ಥದಷ್ಟು ಕುಡಿದು ಇನ್ನೊಂದು ದಿನ ಉಪವಾಸ ಮಾಡಿ ಶುದ್ಧಿ. ಕ್ಷತ್ರಿಯನಿಗೆ  ಯಾರ ಬಳಿಯೂ ಕೇಳದೇ ಮೂರು ಹೊತ್ತು ತಾನಾಗಿ ಸಿಕ್ಕಿದ ಅನ್ನವನ್ನು ಮೂರು ತುತ್ತುಗಳಷ್ಟು ತಿನ್ನುವುದರಿಂದ ಶುದ್ಧಿ.  ವೈಶ್ಯನಿಗೆ ಇದರ ಅರ್ಧ ಎಂದರೆ ಎರಡು ಹೊತ್ತು ಅಯಾಚಿತವಾಗಿ ಸಿಕ್ಕ ಅನ್ನ ಮೂರು ತುತ್ತು ತಿನ್ನುವ ಶಿಕ್ಷೆಯಿಂದ ಶುದ್ಧಿ. ಶೂದ್ರನಿಗೆ ಕೇವಲ ಒಂದು ಹೊತ್ತು ಹೀಗೆ ಮಾಡಿದರೆ ಸಾಕು. ಜವಾಬ್ದಾರಿ ಹೆಚ್ಚಿದ್ದಷ್ಟೂ ಹೊರೆಯೂ ಹೆಚ್ಚು, ತಪ್ಪೆಸಗಿದರೆ ಶಿಕ್ಷೆಯೂ ವಿಧಿ- ನಿಷೇಧಗಳೂ ಹೆಚ್ಚು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩