ಧರ್ಮಾಚರಣೆ ೩೦

     ಧರ್ಮಾಚರಣೆ-೩೦

ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯನಿಗ್ರಹಃ | ದಾನಂ ದಮೋ ದಯಾ ಕ್ಷಾಂತಿಃ ಸರ್ವೇಷಾಂ ಧರ್ಮಸಂಗ್ರಹಃ || ಯಾಜ್ಞವಲ್ಕ್ಯ ಸ್ಮೃತಿ||

ಸಕಲ ಜೀವಿಗಳಲ್ಲಿ ಕಾಯಾ- ವಾಚಾ- ಮನಸಾ ಅಹಿಂಸೆ, ಮನಸಾ ಹಾಗೂ ವಾಚಾ ಸತ್ಯತೆ, ಪರದ್ರವ್ಯದ ಬಗ್ಗೆ ಆಸೆ ಪಡದಿರುವುದು, ದೈಹಿಕ ಹಾಗೂ ಮಾನಸಿಕ ಶೌಚ, ಇಂದ್ರಿಯನಿಗ್ರಹ, ಸಾಧ್ಯವಾದಷ್ಟು ದಾನ, ಸಂಯಮ, ಜೀವಿಗಳಲ್ಲಿ ದಯೆ, ಕ್ಷಮಾಗುಣ ಇವಿಷ್ಟು ಮುಖ್ಯವಾದ ಎಲ್ಲರೂ ಅನುಸರಿಸಬೇಕಾದ ಧರ್ಮದ ಲಕ್ಷಣಗಳು. ಸ್ವಚ್ಛತೆ ಅಂತರಂಗ ಹಾಗೂ ಬಹಿರಂಗಗಳಲ್ಲಿ ಇರಬೇಕು, ಅದೇ ಶೌಚ. ಯಾವ ಸಂದರ್ಭದಲ್ಲೂ ಸಂಯಮ ಕಾಪಾಡಿಕೊಳ್ಳುವುದು ದಮ.  ಪರರ ತಪ್ಪುಗಳನ್ನು ಕ್ಷಮಿಸುವ ಉದಾರತೆಯೂ ಒಂದು ಗುಣ.ಈ ಲಕ್ಷಣಗಳನ್ನು ಅಳವಡಿಸಿಕೊಳ್ಳದೆ ಎಷ್ಟು ಪೂಜೆ, ಉಪವಾಸ, ಉಪನ್ಯಾಸ, ಲೇಖನ ಏನು ಮಾಡಿದರೂ ವ್ಯಕ್ತಿ ಧಾರ್ಮಿಕನಾಗಲಾರ. ಧರ್ಮದ ಪಂಚಾಂಗ ಅಥವಾ ಅಡಿಪಾಯವೇ ಇದು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩