ಪದಶಕ್ತಿ ೩೨

🏹*ಪದಶಕ್ತಿ* ---೩೨🌄
 

*ಸ್ವಾರಾಜ್*

_ಇಂದ್ರನ ಹೆಸರು. ಸ್ವ ಎಂದರೆ ಸ್ವರ್ಗ. ಸ್ವರ್ಗದಲ್ಲಿ ಶೋಭಿಸುತ್ತಾನೆ ರಾಜನಾಗಿ. ಇನ್ನೊಂದು ಸ್ವ ಎಂದರೆ ದೇವತೆಗಳು. ಅವರಿಗೆ ಒಡೆಯನಾಗಿ ದೇವರಾಜನಾಗಿ ಮಿಂಚುತ್ತಿದ್ದಾನೆ. ಇನ್ನೊಂದು ಅರ್ಥ ಸ್ವ ಅಂದರೆ ಧನ. ಸ್ವರ್ಗದಲ್ಲಿ ಅಪಾರ ಸಂಪತ್ತಿನಿಂದ ಮೆರೆಯುತ್ತಿರುವನು. ಮತ್ತೊಂದು ಅರ್ಥದಲ್ಲಿ ಸು ಎಂದರೆ ಒಳ್ಳೆಯ ಸಂಪತ್ತಿನಿಂದ ಎಲ್ಲೆಡೆ ರಾಜಿಸುತ್ತಿರುವನು ಎಂಬುದಾಗಿ. ಇಂದ್ರ ಶಬ್ದದ ಅರ್ಥವೇ ಐಶ್ವರ್ಯಾಧಿಪತಿ ಎಂದು. ಇಲ್ಲಿ ಅದನ್ನೂ ಹೇಳಲಾಗಿದೆ._

ಭಾಗವತದ ಈ ಶ್ಲೋಕದಲ್ಲಿ ಸ್ವಾರಾಜ್ಯ ಪದದ ಬಳಕೆಯಿದೆ.
*भवान् भक्तिमता लभ्यो दुर्लभः सर्वदोहिनाम् । स्वाराज्यस्याप्यभिमत एकान्तेना- त्मविद्गतिः*

_ಭಗವಂತನು ಭಕ್ತಿಗೆ ಮಾತ್ರ ಒಲಿಯುವವನು.  ದೇವತೆಗಳು ಮುಕ್ತಿ ಪಡೆಯಲು ಇವನಲ್ಲೇ ಭಕ್ತಿ ನಡೆಸಬೇಕು. ಸ್ವರ್ಗವಾಸಿಗಳೆಂದಾಕ್ಷಣ ಮುಕ್ತಿ ಸಿಕ್ಕಿತೆಂದಲ್ಲ, ಹಾದಿ ಹತ್ತಿರವಿದೆ, ಬೇಕಾದರೆ ಭಕ್ತಿಯಿಂದ ಪಡೆಯಬಹುದು._

ಕನ್ನಡದ ದಾಸರು ಸ್ವರ್ಗ ಎಂಬ ಅರ್ಥದಲ್ಲಿ ಈ ಸ್ವಾರಾಜ್ಯವನ್ನು ಬಳಸಿದ್ದಾರೆ. 

_ಶ್ಯಾಮಸುಂದರಾ ರಾಜರಾಜಪೂಜ್ಯ ಸ್ವಾರಾಜ್ಯ ಚೆನ್ನಕೇಶವಾ  ಸ್ವರ್ಗಾಧಿಪ ಚೆನ್ನಕೇಶವನೇ ಎಂದು ಸ್ತುತಿಸಿದ್ದಾರೆ‌._

_ಇಂದ್ರನು ನಮಗೂ ಸ್ವ ಎಂದರೆ ಸಂಪತ್ತನ್ನು, ದೇವತ್ವವನ್ನು, ಸ್ವರ್ಗವನ್ನೂ ಕರುಣಿಸಲೆಂದು ಪ್ರಾರ್ಥಿಸೋಣ._



ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩