ಧರ್ಮಾಚರಣೆ ೫೭

ಧರ್ಮಾಚರಣೆ-೫೭

ಏಕಪಂಕ್ತ್ಯುಪವಿಷ್ಟಾನಾಂ ವಿಪ್ರಾಣಾಂ ಸಹಭೋಜನೇ | ಯದ್ಯೇಕೋಪಿ ತ್ಯಜೇತ್ಪಾತ್ರಂ ಶೇಷಮನ್ನಂ ನ ಭೋಜಯೇತ್ || ಪರಾಶರ ಸ್ಮೃತಿ||

ಒಂದೇ ಪಂಕ್ತಿಯಲ್ಲಿ ಕುಳಿತು ಹಸ್ತೋದಕ ಕೊಟ್ಟು ವಿಪ್ರರು ಅಥವಾ ಜ್ಞಾನಿಗಳು ಉಣ್ಣುತ್ತಿರುವಾಗ ಒಬ್ಬನು ಮಧ್ಯದಲ್ಲಿ ಎದ್ದುಹೋದರೂ ಉಳಿದವರು ಊಟ ಮಾಡುವುದು ಸರಿ ಆಗುವುದಿಲ್ಲ. ಹಾಗಾಗಿ ಊಟ ಮಾಡಲೆಂದು ಕೂತ ಮೇಲೆ ಎಲ್ಲರೊಡನೆ ಒಂದಾಗಿ ಪ್ರಸಾದವೆಂದು ಭುಂಜಿಸಬೇಕು. ಎಲ್ಲಿಗೋ ಹೋಗಬೇಕೆಂದೋ, ಬಡಿಸುವುದು ನಿಧಾನವೆಂದೋ, ಹಸಿವೆ ಕ್ಷೀಣವಿದೆ ಎಂದು ಮಧ್ಯದಲ್ಲಿ ಎದ್ದರೆ ಕುಳಿತವರನ್ನು ಅವಮಾನಿಸಿದ ದೊಡ್ಡ ಪಾಪಕ್ಕೆ ಕಾರಣವಾಗುತ್ತದೆ. ಅಂತಹ ಸಂದರ್ಭದಲ್ಲಿ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳದೇ ಇರುವುದು ಆತ್ಮಕ್ಕೆ ಶ್ರೇಯಸ್ಕರ. ಅದಕ್ಕಾಗಿ ಸಂತರ ಮಾತು *ಉದರ ಭರಣ ನೋಹೇ ಝಾಣಿರೇ ಯಜ್ಞ ಕರ್ಮ* ಎಂದು. ಇದೊಂದು ಯಜ್ಞವೆಂಬ ಭಾವನೆಯಿಂದ ಭುಂಜಿಸತೊಡಗಿದರೆ ಏಳುವ ಪ್ರಸಕ್ತಿ ಎಂದಿಗೂ ಬರದು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩