ಧರ್ಮಾಚರಣೆ ೨೬

ಧರ್ಮಾಚರಣೆ-- ೨೬

ವಸವಃ ಪಿತರೋ ಜ್ಞೇಯಾ ರುದ್ರಾ ಜ್ಞೇಯಾಃ ಪಿತಾಮಹಾಃ | ಪ್ರಪಿತಾಮಹಾಸ್ತಥಾದಿತ್ಯಾಃ ಶ್ರುತಿರೇಷಾ ಸನಾತನೀ || ಮನುಸ್ಮೃತಿ, ದೇವಲ ವಚನ || ವಸುರುದ್ರಾದಿತಿಸುತಾಃ ಪಿತರಃ ಶ್ರಾದ್ಧ ದೇವತಾಃ | ಯಾಜ್ಞವಲ್ಕ್ಯ ಸ್ಮೃತಿ||

ಶ್ರಾದ್ಧದಲ್ಲಿ ವಸು-ರುದ್ರ-ಆದಿತ್ಯ ರೆಂದು ತಂದೆ-ಅಜ್ಜ-ಮುತ್ತಜ್ಜ ಅಥವಾ ತಾಯಿ-ಅಜ್ಜಿ- ಮುತ್ತಜ್ಜಿ ಇತ್ಯಾದಿ ಉಚ್ಚಾರಣೆ ಮಾಡಲು ಈ ಶ್ಲೋಕವು ಆಧಾರರೂಪವಾದುದು.ವಸುಗಳು ಪಿತೃಗಳೆಂದು ಗುರುತಿಸಲ್ಪಟ್ಟರೆ, ರುದ್ರರು ಪಿತಾಮಹರು, ಆದಿತ್ಯರು ಪ್ರಪಿತಾಮಹರು. ಇದನ್ನೇ ಯಾಜ್ಞವಲ್ಕ್ಯರು ಹೇಳಿದ್ದು ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರೆಂಬ ಅದಿತಿ ಸುತರು ಪಿತೃದೇವತೆಗಳೆಂದು ಪ್ರಸಿದ್ಧರಾದವರು. ಹಾಗಾಗಿ ಯಾವ ಶ್ರಾದ್ಧ ಮಾಡುವುದಿದ್ದರೂ ನಮ್ಮ ಹಿರಿಯರನ್ನು ಈ ರೂಪದಲ್ಲಿ ಕಲ್ಪಿಸಿ ಪೂಜಿಸಬೇಕು. ಪಿತೃಗಳು ಯಾವ ರೂಪದಲ್ಲಿದ್ದರೂ ಈ ದೇವತೆಗಳು ಅವರಿಗೆ ಪೂಜೆಯನ್ನು ತಲುಪಿಸುತ್ತಾರೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩