ಧರ್ಮಾಚರಣೆ ೪೫

   ಧರ್ಮಾಚರಣೆ--- ೪೫

ಕ್ಷುತೇ ನಿಷ್ಠೀವನೇ ಚೈವ ದಂತೋಚ್ಛಿಷ್ಟೇ ತಥಾನೃತೇ | ಪತಿತಾನಾಂ ಚ ಸಂಭಾಷೇ ದಕ್ಷಿಣಂ ಶ್ರವಣಂ ಸ್ಪೃಶೇತ್ || ಪರಾಶರ ಸ್ಮೃತಿ||

ಸಭೆಯಲ್ಲಿ ಅಥವಾ ಪ್ರಯಾಣದಲ್ಲಿ ಅಥವಾ ಪೂಜಾದಿಗಳಲ್ಲಿ ತೊಡಗಿದ್ದಾಗ ಸೀನು ಬಂದರೆ, ಆಕಳಿಕೆ ಬಂದರೆ, ಉಗುಳು ಹೊರ ಚೆಲ್ಲಿದರೆ, ಹಲ್ಲಿನಲ್ಲಿ ಏನೋ ಆಹಾರಶೇಷ ಸಿಕ್ಕಿಕೊಂಡು ಕಿರಿಕಿರಿಯೆಂದು ತೆಗೆದಾಗ, ಆಕಸ್ಮಿಕವಾಗಿ ಸುಳ್ಳು ನುಡಿದಾಗ , ಕೆಟ್ಟ ಮನಸ್ಥಿತಿಯ ವ್ಯಕ್ತಿಗಳೊಡನೆ ಸಂಭಾಷಣೆ ಮಾಡಿದಾಗ ದೋಷ ನಿವೃತ್ತಿಗೆ ಬಲಗಿವಿಯನ್ನು ಸ್ಪರ್ಶಿಸಬೇಕು. ಸಮೀಪದಲ್ಲಿ ನೀರಿನ ಲಭ್ಯತೆ ಕಂಡುಬಂದರೆ ಅಚಮನ ಮಾಡಬೇಕು, ಹಾಗಲ್ಲದಿದ್ದರೆ ಬಲಗಿವಿಯ ಸ್ಪರ್ಶದಿಂದ ಶೌಚವು ಸಂಪನ್ನವಾಗುವುದು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩