ಧರ್ಮಾಚರಣೆ ೫೫

 ಧರ್ಮಾಚರಣೆ -೫೫

ಉಪವಾಸೈರ್ವ್ರತೈಃ ಪುಣ್ಯೈಃ ಸ್ನಾನಸಂಧ್ಯಾರ್ಚನಾದಿಭಿಃ | ಜಪಹೋಮದ್ವಯಾ ದಾನೈಃ ಶುದ್ಧ್ಯಂತೇ ಬ್ರಾಹ್ಮಣಾದಯಃ || ಪರಾಶರ ಸ್ಮೃತಿ ||

 
ಪಕ್ಷಕ್ಕೊಂದಾವರ್ತಿ ಉಪವಾಸ ಅಥವಾ ವಿಶೇಷ ಪರ್ವಗಳಲ್ಲಿ ಆದರೂ ಉಪವಾಸ, ಪ್ರತಿಯೊಂದು ಮಾಸಗಳಲ್ಲಿ ಬರುವ ನಾನಾ ವ್ರತಗಳಲ್ಲಿ ಕೆಲವನ್ನಾದರೂ ಯಥಾಶಕ್ತಿ ಆಚರಿಸುವುದು, ತೀರ್ಥಗಳಲ್ಲಿ ಕೆಲವೊಮ್ಮೆ ಮಿಂದೇಳುವುದು, ಸಂಧ್ಯಾಸಮಯದಲ್ಲಿ ಭಗವಂತನ ಚಿಂತನೆಯಲ್ಲಿ- ಜ್ಞಾನಾರ್ಜನೆಯಲ್ಲಿ ತೊಡಗುವುದು,  ಪರಮಾತ್ಮನನ್ನು ಭಕ್ತಿಯಿಂದ ಕೆಲವು ನಾಮಗಳಿಂದಾದರೂ ಅರ್ಚಿಸುವುದು, ಇಷ್ಟಮಂತ್ರಗಳನ್ನು ಅಥವಾ ದೇವರ ಹೆಸರುಗಳನ್ನು ಯಥಾಶಕ್ತಿ ಜಪಿಸುವುದು, ಯಜ್ಞ ಮಾಡುವುದು, ಸಂಪತ್ತಿನ ಶೇಖರಣೆಗೆ ಗಮನ ಕೊಡುವಂತೆ ಒಂದು ಭಾಗ ಸದಾ ದಾನ ಮಾಡುವುದು ಇವುಗಳು ಎಲ್ಲಾ ಜಾತಿ- ವರ್ಣಗಳ ಪಾಪ ಪರಿಹಾರಕ ಕರ್ಮಗಳು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩