ಧರ್ಮಾಚರಣೆ ೫೧

          ಧರ್ಮಾಚರಣೆ--೫೧

ಏಕೈಕಂ ಹ್ರಾಸಯೇದ್ಗ್ರಾಸಂ ಕೃಷ್ಣೇ ಶುಕ್ಲೇ ಚ ವರ್ಧಯೇತ್ | ಅಮಾವಾಸ್ಯಾಂ ನ ಭುಂಜೀತ ಹ್ಯೇಷಚಾಂದ್ರಾಯಣೋ ವಿಧಿಃ || ಪರಾಶರ ಸ್ಮೃತಿ|

ಧರ್ಮಶಾಸ್ತ್ರದಲ್ಲಿ ಬೃಹತ್ ಪಾಪಗಳಿಗೆ ( ಕೊಲೆ, ಹಿಂಸೆ, ಅತ್ಯಾಚಾರ ಮೊದಲಾದವುಗಳಿಗೆ ಪ್ರಾಯಶ್ಚಿತ್ತ ಇಲ್ಲ ) ಪ್ರಾಯಶ್ಚಿತ್ತ ರೂಪವಾಗಿ ಚಾಂದ್ರಾಯಣ ವ್ರತವನ್ನು ಹೇಳುತ್ತಾರೆ. ಇದು ಬರಿಯ ಪಾಪ ನಿವೇದನೆ ಅಲ್ಲ. ದಿನಕ್ಕೆ ಒಂದು ತುತ್ತಿನಂತೆ ಶುಕ್ಲಪಕ್ಷದ ಪಾಡ್ಯದಿಂದ ಆರಂಭಿಸಿ 
ತನಕ ಹದಿನೈದು ತುತ್ತು ತಿನ್ನುವುದು. ನಂತರ ಒಂದೊಂದು ಕಡಿಮೆ ಮಾಡುತ್ತಾ ಅಮಾವಾಸ್ಯೆಯಂದು ಉಪವಾಸ ಮಾಡುವುದು. ಒಂದು ತುತ್ತು ಒಂದು ಮೊಟ್ಟೆಯ ಗಾತ್ರ ಮೀರಬಾರದು. ಮೊದಲ ದಿನ ಕೇವಲ ಒಂದೇ ತುತ್ತು ಊಟ. ಹೀಗೆ ಮಾಡಿದಾಗ ಸಣ್ಣ ಪುಟ್ಟ ಪಾಪಗಳಿಂದ ಉ: ಸುಳ್ಳಾಡುವುದು, ನಿಂದಿಸುವುದು, ಹಂಗಿಸುವುದು, ಅಪ್ರಾಮಾಣಿಕತೆ ಮೊದಲಾದವುಗಳಿಂದ ಶುದ್ಧನಾಗುವನು. ಪ್ರಾಯಶ್ಚಿತ್ತ ಆಚರಿಸಿ ಮತ್ತೆ ಪಾಪ ಮಾಡಿದರೆ ಮತ್ತೆ ಪ್ರಾಯಶ್ಚಿತ್ತ ಇಲ್ಲ. ಮತ್ತೆ ನರಕವೇ ಗತಿ. ಹಾಗಾಗಿ ಚಕ್ರದಂತೆ ಪುನಃಪಾಪ, ಪುನಃ ಪ್ರಾಯಶ್ಚಿತ್ತ ಅಲ್ಲ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩