ಧರ್ಮಾಚರಣೆ ೪೪

   ಧರ್ಮಾಚರಣೆ---೪೪

ಯದ್ವದಂತಿ ತಮೋ ಮೂಢಾ ಮೂರ್ಖಾ ಧರ್ಮಮತದ್ವಿದಃ | ತತ್ಪಾಪಂ ಶತಧಾ ಭುಕ್ತ್ವಾ ತದ್ವಕ್ತೃಮಧಿಗಚ್ಛತಿ || ಪರಾಶರ ಸ್ಮೃತಿ||

ಯಾವ ವಿಷಯದ ಬಗ್ಗೆಯೂ ಹೆಚ್ಚು ವಿಚಾರ ಮಾಡದೇ ಧರ್ಮೋಪದೇಶ ಮಾಡಿದರೆ ಉಪದೇಶ ಕೇಳಿ ಆಚರಿಸುವವನ ನೂರ್ಮಡಿ ಪಾಪ ಉಪದೇಶಕನನ್ನು ಸೇರುವುದು. ಜಪ ಹತ್ತು ಮಾಡಿದರೂ ಸಾಕು, ಅಶೌಚ ಆಚರಿಸದಿದ್ದರೂ ತೊಂದರೆ ಇಲ್ಲ, ಪೂಜೆ- ವ್ರತ- ಶೌಚದ ಆಚರಣೆ ಅಲ್ಪವಾದರೂ ಸಾಕು ಇತ್ಯಾದಿ ಮನಸ್ಸಿಗೆ ಬಂದಂತೆ ಅಥವಾ ಆಪತ್ಕಾಲದ ಧರ್ಮವನ್ನು ಸಾಮಾನ್ಯ ಧರ್ಮದಂತೆ ಉಪದೇಶಿಸಿದರೆ ಅದರಿಂದ ಸಮಾಜದ ಸದಾಚಾರಕ್ಕೆ ಕುಂದುಂಟಾಗಿ ಇಂತಹ ಉಪದೇಶ ಮಾಡಿದವನು ಪಾಪಿಯಾಗುವನು. ಹಾಗಾಗಿ ಸಂಪ್ರದಾಯವೆಂತಲೋ, ರೂಢಿಯೆಂತಲೋ ತಪ್ಪು ಆಚರಣೆಗಳ ಉಪದೇಶ ಎಂದಿಗೂ ಸಲ್ಲದು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩