ಧರ್ಮಾಚರಣೆ ೧೨೬

ಧರ್ಮಾಚರಣೆ-೧೨೬

ಅಮೇಧ್ಯಾಕ್ತಸ್ಯ ಮೃತ್ತೋಯೈಃ ಶುದ್ಧಿರ್ಗಂಧಾದಿಕರ್ಷಣಾತ್ | ವಾಕ್ಯಸ್ತಮಂಬುನಿರ್ಣಿಕ್ತಮಜ್ಞಾತಂ ಚ ಸದಾ ಶುಚಿ || ಯಾಜ್ಞವಲ್ಕ್ಯ ಸ್ಮೃತಿ|| 

ನೊಣ-ವೀರ್ಯ- ರಕ್ತ- ಚರ್ಮದ ತುಂಡು- ಮೂತ್ರ- ಕಿವಿಯ ಮಲ-ಉಗುರು- ಕಣ್ಣೀರು- ಬೆವರು- ಮದ್ಯ-ಉಗುಳು-ಸೀನು  ಮೊದಲಾದವು ಅಮೇಧ್ಯಗಳು ಹಾಗಾಗಿ ಅಪವಿತ್ರ. ಇವುಗಳ ಸಂಸರ್ಗಕ್ಕೆ ಒಳಗಾದರೆ ಮಣ್ಣು ಹಚ್ಚುವುದು ಹಾಗೂ ನೀರಿನಿಂದ ತೊಳೆಯುವುದರ ಮುಖಾಂತರ ಶುದ್ಧಿ ಮಾಡಿಕೊಳ್ಳಬೇಕು. ಗಂಧ- ಚಂದನದ ಲೇಪನದಿಂದಲೂ ಶುದ್ಧಿ ಇದೆ. ಇದು ಆಗದಿದ್ದರೆ ಶ್ರೇಷ್ಠ ಜ್ಞಾನಿಗಳು ಇದು ಶುದ್ಧ ಎಂದು ನುಡಿದರೂ ಶುದ್ಧಿಯಾಗುವುದು. ನಮಗೆ ತಿಳಿಯದೇ ಇವುಗಳ ಸಂಪರ್ಕ ಉಂಟಾಗಿ ಉಪಯೋಗಿಸಿದ್ದರೆ ಅದು ಶುಚಿಯೇ ಸರಿ. ಅಮೇಧ್ಯವೆಂದು ತಿಳಿದೂ ಶುದ್ಧಿ ಮಾಡಿಕೊಳ್ಳದಿರುವುದು ರೋಗ-ಪಾಪ ಕಾರಕ. ಸಾಂಕ್ರಾಮಿಕ ರೋಗಗಳಿಗೆ ಇದೇ ಹೇತು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩