ಧರ್ಮಾಚರಣೆ ೧೩೪

ಧರ್ಮಾಚರಣೆ-೧೩೪

ಕುಶಾಃ ಶಾಕಂ ಪಯೋ ಮತ್ಸ್ಯಾ ಗಂಧಾಃ ಪುಷ್ಪಂ ದಧಿ ಕ್ಷಿತಿಃ | ಮಾಂಸಂ ಶಯ್ಯಾಸನಂ ಧಾನ್ಯಾಃ ಪ್ರತ್ಯಾಖ್ಯೇಯಂ ನ ವಾರಿ ಚ || ಯಾಜ್ಞವಲ್ಕ್ಯ ಸ್ಮೃತಿ||

ದರ್ಭೆ-ತರಕಾರಿ-ಹಾಲು-ಮೀನು,ಮಾಂಸ( ಮಾಂಸಾಹಾರಿಗಳಾದ ಪಕ್ಷದಲ್ಲಿ) -ಗಂಧ-ಹೂವು-ಮೊಸರು-ಭೂಮಿ( ಉಳಿದುಕೊಳ್ಳಲು ಜಾಗ) - ಹಾಸಿಗೆ-ಚಾಪೆ, ಕುರ್ಚಿ ಮೊದಲಾದ ಆಸನ- ಧಾನ್ಯಗಳನ್ನು ಯಾರಾದರೂ ಪ್ರೀತಿ ಅಥವಾ ವಿಶ್ವಾಸದಿಂದ ಕೊಟ್ಟರೆ ಮರುಮಾತಿಲ್ಲದೆ ಸ್ವೀಕರಿಸಬಹುದು. ಅವುಗಳನ್ನು ಬೆಲೆ ಕೊಟ್ಟು ತೆಗೆದುಕೊಳ್ಳುವವುದಕ್ಕಿಂತ ಹೀಗೆ ಕೊಡುಕೊಳ್ಳುವಿಕೆ ಮೂಲಕ ಸ್ವೀಕರಿಸುವುದು ಉತ್ತಮ. ಆಹಾರ ಹಾಗೂ ಕೆಲವು ವಸ್ತುಗಳ ಬಗ್ಗೆ ಬೆಲೆ ಕಟ್ಟುವುದು ಅಥವಾ ತಾತ್ಸಾರ ಎಂದಿಗೂ ಸಲ್ಲದು.  ಪರಸಂತೋಷಾಚರಣೆಯೇ ಭಗವಂತನ ಅತಿದೊಡ್ಡ ಪೂಜೆ. ಸಮಯ ಸಂದರ್ಭ ನೋಡಿ ಪ್ರತಿಗ್ರಹ ಮಾಡುವುದು ಇವುಗಳ ವಿಷಯದಲ್ಲಿ ಪಾಪಕರ ಅಲ್ಲ. 

 ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩