ಧರ್ಮಾಚರಣೆ ೧೫೦

ಧರ್ಮಾಚರಣೆ-೧೫೦

ದುರ್ಭಿಕ್ಷೇ ಧರ್ಮಕಾರ್ಯೇ ಚ ವ್ಯಾಧೌ ಸಂಪ್ರತಿಶೋಧನೇ| ಗೃಹೀತಂ ಸ್ತ್ರೀಧನಂ ಭರ್ತಾ ನ ಸ್ತ್ರಿಯೈ ದಾತುಮರ್ಹತಿ|| ಯಾಜ್ಞವಲ್ಕ್ಯ ಸ್ಮೃತಿ||


ದುರ್ಭಿಕ್ಷೆ ಕಂಡುಬಂದಾಗ,ಧರ್ಮಕಾರ್ಯಗಳಿಗಾಗಿ, ರೋಗದ ಔಷಧೋಪಚಾರಕ್ಕಾಗಿ, ಶಿಕ್ಷೆ-ನಿಗ್ರಹಗಳಿಗಾಗಿ ಪತಿಯು ಪತ್ನಿಯ ಧನವನ್ನು ಉಪಯೋಗಿಸಿದರೆ ಹಿಂತಿರುಗಿ ಕೊಡಬೇಕಾಗಿಲ್ಲ. ಸೂಕ್ತ ಕಾರಣವಿದ್ದಾಗ ಸ್ತ್ರೀಧನವು ವಿನಿಯೋಗ ಆಗಬಹುದು. ಪತ್ನಿ ಬದುಕಿರುವ ತನಕ ಪತಿಯನ್ನು ಬಿಟ್ಟು ಉಳಿದವರಿಗೆ ಅವಳ ಧನದ ಉಪಯೋಗದ ಹಕ್ಕು ಇರುವುದಿಲ್ಲ. ದಾಯಾದಿಗಳೂ ಕೂಡ ಸ್ತ್ರೀಧನವನ್ನು ಪಾಲುಮಾಡಿ ತೆಗೆದುಕೊಳ್ಳುವಂತಿಲ್ಲ. ಸ್ತ್ರೀಯರ ವಿಷಯದಲ್ಲಿ ನಮ್ಮ ಸ್ಮೃತಿಗಳು ತುಂಬಾ ಸೂಕ್ಷ್ಮವಾಗಿ ಉದಾರವಾಗಿ ವ್ಯವಹರಿಸಿವೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩