ಪದಶಕ್ತಿ ೪೩
🏹*ಪದಶಕ್ತಿ* ---೪೩🌄
*ಮಾತರಿಶ್ವಾ*
_ಮಾತರಿ-ಅಂತರಿಕ್ಷೇ ಶ್ವಯತಿ ಎಂಬಂತೆ ತಾಯಿಯಲ್ಲೂ ಅಂತರಿಕ್ಷದಲ್ಲೂ ಸಂಚರಿಸುವಂತಹದ್ದು ಗಾಳಿ. ನಮ್ಮನ್ನು ತಾಯಿಯಂತೆ ಸದಾ ಪೊರೆಯುವಂತಹದು. ಗರ್ಭಾವಸ್ಥೆಯಲ್ಲಿ ಜೀವ ಮೊಳಕೆ ಒಡೆದ ಕ್ಷಣದಿಂದ ತಾಯಿಯೆಂಬ ಮಾಧ್ಯಮದ ಮೂಲಕ ನಮ್ಮನ್ನು ಅನುಕ್ಷಣವೂ ಬದುಕಿಸುವ ಶಕ್ತಿ._
_ಮಾತರಿ ಶ್ವಯತೇ ವರ್ಧತೇ ಎಂದರೆ ನಮ್ಮ ಜೀವಶಕ್ತಿಯನ್ನು ತಾಯಿಯ ಮೂಲಕ ಹೆಚ್ಚಿಸುತ್ತದೆ ಎನ್ನಬಹುದು._
_तनूनपादुच्यते गर्भं आसुरो नराशंसो भवति यद्विजायते । मातरिश्वा यदमिमीत मातरि वातस्य सर्गो अभवत् सरीमणि_ _ವೇದದ ಈ ಮಂತ್ರದಂತೆ ಬೆಂಕಿಯು ಅರಣಿಯಲ್ಲಿ ಗೂಢವಾಗಿದ್ದಾಗ ತನೂನಪಾತ್ ಎಂಬ ಹೆಸರು ಪಡೆದರೆ ಹೊರ ಬಂದಾಗ ಮಾತರಿಶ್ವಾ ಎಂಬ ಹೆಸರು ಪಡೆಯುತ್ತದೆ. ಹಾಗಾಗಿ ಅಗ್ನಿಯ ಪರ್ಯಾಯವೂ ಹೌದು._
ಋಗ್ವೇದದ ಬಹಳ ಕಡೆ ಈ ಶಬ್ದ ಸಿಗುತ್ತದೆ.
*आन्यं दिवो मातरिश्वाजभारामथ्नादन्यं परिश्येनो अद्रेः* ಇಲ್ಲೂ ಅಗ್ನಿ ಅಥವಾ ಅಗ್ನಿಗೆ ಸಹಾಯಕ ಎಂಬ ಅರ್ಥದಲ್ಲೇ ಇರುವುದು. ಅಗ್ನಿ-ವಾಯು ಪರಸ್ಪರ ಸಹಾಯಕ ದೇವತೆಗಳು ಅಥವಾ ಒಂದೇ ಶಕ್ತಿಯ ಎರಡು ರೂಪಗಳು ಎನ್ನಬಹುದು.
_|ತಾವಕದಿ ನೀ ಮಾತರಿಶ್ವಾಖ್ಯನೆಂದೆನಿಸಿ ಸೇವಿಸುವೆ ಘರ್ಮೋಕ್ತದಿ ||ಜೀವ ಸಕಲೋತ್ತಮನೆ | ದಾವ ಶಿಖಿ ಭವವನಕೆದೇವ ಬಲಿಭುಜ ಮಾರುತೀ |ದೇವಾದಿ ವಂದ್ಯ ಗುರು | ಗೋವಿಂದ ವಿಠ್ಠಲನಭಾವದಲಿ ತೋರಿ ಪೊರೆಯೊ_
ಗುರುಗೋವಿಂದವಿಠಲರು ವಾಯುವನ್ನು ಸ್ತುತಿಸಿದ್ದಾರೆ.
_ವಾಯುವು ನಮ್ಮನ್ನು ಸದಾ ಕಾಲ ತಾಯಿಯಂತೆ ಪೊರೆಯಲಿ ಎಂದು ಆಶಿಸೋಣ._
ತಪ್ಪುಗಳಿದ್ದರೆ ತಿದ್ದಿ.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ ಈ ಕೆಳಗಿನ ಕೊಂಡಿಗೆ
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ