ಧರ್ಮಾಚರಣೆ ೧೩೮
ಧರ್ಮಾಚರಣೆ-೧೩೯
ಅಪರಾಹ್ನೇ ಸಮಭ್ಯರ್ಚ್ಯ ಸ್ವಾಗತೇನಾಗತಾಂಸ್ತು ತಾನ್ | ಪವಿತ್ರಪಾಣಿರಾಚಾಂತಾನಾಸನೇಷೂಪವೇಶಯೇತ್|| ಯಾಜ್ಞವಲ್ಕ್ಯ ಸ್ಮೃತಿ||
ಮನೆಯಲ್ಲಿ ಶ್ರಾದ್ಧ ಇದ್ದಾಗ ಹಿಂದಿನ ದಿನ ಆಮಂತ್ರಿಸಿದ ವಿಪ್ರರನ್ನು ಆ ದಿನ ಮಧ್ಯಾಹ್ನದ ಸಮಯದಲ್ಲಿ ಸ್ವಾಗತಿಸಿ ಪಾದ ತೊಳೆದು ಆಚಮನ ಮಾಡಿ ಪವಿತ್ರ ಧರಿಸಿ ಆಸನದಲ್ಲಿ ಕುಳ್ಳಿರಿಸಬೇಕು. ಶ್ರಾದ್ಧವನ್ನು ನಮ್ಮ ಅನುಕೂಲವೆಂದು ಅಥವಾ ಮಠಗಳ ಮಂದಿರಗಳ ಅನುಕೂಲಕ್ಕೆಂದು ಬೇಕುಬೇಕಾದ ಸಮಯಕ್ಕೆ ಮಾಡುವುದು ಎಂದಿಗೂ ಸರಿಯಲ್ಲ. ಈ ಸ್ಮೃತಿ ಹೇಳುವಂತೆ ನಿಮಂತ್ರಿತ ವಿಪ್ರರು ಬರಬೇಕಾದುದೇ ಮಧ್ಯಾಹ್ನ. ಕುತಪ ಕಾಲದಲ್ಲಿ ಅಂದರೆ ಸುಮಾರು ೧೨ ಗಂಟೆಯ ಮೇಲೆ ಆರಂಭಿಸಿ ಮುಂದಿನ ಎಂಟು ಗಳಿಗೆಯಲ್ಲಿ ಅಂದರೆ ಸುಮಾರು ನಾಲ್ಕು ಗಂಟೆಯ ಒಳಗೆ ಮುಗಿಸಬೇಕು. ನಮಗಾದರೂ ಸಮಯಕ್ಕೆ ಸರಿಯಾಗಿ ಊಟ ಕೊಟ್ಟರೆ ಹೊಟ್ಟೆ ತುಂಬುವುದು. ಮಧ್ಯರಾತ್ರಿ ಅಥವಾ ಬೆಳಿಗ್ಗೆ ನಾಲ್ಕು ಗಂಟೆಗೆ ಊಟಕ್ಕೆ ಬನ್ನಿ ಎಂದರೆ ಹೇಗಾಗುವುದು! ಹಾಗಾಗಿ ಶ್ರಾದ್ಧದಲ್ಲಿ ಶ್ರದ್ಧೆಯ ಜೊತೆಗೆ ಸಮಯವೂ ಮುಖ್ಯ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ