ಧರ್ಮಾಚರಣೆ ೧೩೩
ಧರ್ಮಾಚರಣೆ-೧೩೩
ಗೃಹಧಾನ್ಯಾಭಯೋ ಪಾನಚ್ಛತ್ರ ಮಾಲ್ಯಾನುಲೇಪನಮ್ | ಯಾನಂ ವೃಕ್ಷಂ ಪ್ರಿಯಂ ಶಯ್ಯಾಂ ದತ್ವಾತ್ಯಂತಸುಖೀ ಭವೇತ್ || ಯಾಜ್ಞವಲ್ಕ್ಯ ಸ್ಮೃತಿ||
ವಸತಿ ಇಲ್ಲದವನಿಗೆ ಮನೆ ಕಟ್ಟಿಸಿಕಟ್ಟಿಕೊಡುವುದು, ಉಣ್ಣಲು ಕಷ್ಟ ಇದ್ದವನಿಗೆ ಧಾನ್ಯ ನೀಡುವುದು, ಭಯಪಡುವವರಿಗೆ ಅಭಯ ನೀಡುವುದು, ಪಿಪಾಸುವಿಗೆ ನೀರು ಅಥವಾ ಪಾನಕ ಕೊಡುವುದು, ಉಳಿದುಕೊಳ್ಳಲು ಛತ್ರ ಅಥವಾ ಎಲ್ಲಾದರೂ ಜಾಗ ವ್ಯವಸ್ಥೆ ಮಾಡುವುದು, ಧರಿಸಲು ಉತ್ತಮ ಸುಗಂಧದ ಪುಷ್ಪದ ಹಾರ ನೀಡುವುದು, ಪೂಸಿಕೊಳ್ಳಲು ಗಂಧ-ಚಂದನ ನೀಡುವುದು, ವಾಹನಗಳನ್ನು ದಾನ ಮಾಡುವುದು, ಫಲಭರಿತ ಮರವೊಂದನ್ನು ನೆಟ್ಟು ಬಳಸಿಕೊಳ್ಳಲು ಬಿಡುವುದು, ಇದಾವುದೂ ಆಗದಿದ್ದರೂ ವ್ಯಕ್ತಿಗೆ ಯಾವುದು ಇಷ್ಟವೋ ಅದನ್ನು ನೀಡುವುದು ಅಥವಾ ಮಲಗಲು ಹಾಸಿಗೆ ನೀಡುವುದು. ಈ ಎಲ್ಲಾ ದಾನಗಳೂ ಇಹಪರಗಳಲ್ಲಿ ಜನ್ಮಜನ್ಮಗಳಲ್ಲಿ ಸುಖವನ್ನು ತಂದುಕೊಡುತ್ತವೆ. ಹೆಸರಿನ ಕೀರ್ತಿಯ ಅಪೇಕ್ಷೆ ಇಲ್ಲದೆ ಪ್ರತಿಫಲ ಅಥವಾ ಕೃತಜ್ಞತೆ ಬಯಸದೇ ದಾನ ಮಾಡುವುದು ಸರ್ವಥಾ ಶ್ರೇಷ್ಠ ಆಗಿದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ