ಧರ್ಮಾಚರಣೆ ೧೪೬
ಧರ್ಮಾಚರಣೆ-೧೪೭
ಧರ್ಮಜ್ಞಾಃ ಶುಚಯೋsಲುಬ್ಧಾ ಭವೇಯುಃ ಕಾರ್ಯಚಿಂತಕಾಃ | ಕರ್ತವ್ಯಂ ವಚನಂ ತೇಷಾಂ ಸಮೂಹಹಿತವಾದಿನಾಮ್ ||ಯಾಜ್ಞವಲ್ಕ್ಯ ಸ್ಮೃತಿ||
ಒಂದು ಸಮೂಹಕ್ಕೆ ನಾಯಕನನ್ನು ಆರಿಸುವಾಗ ಧರ್ಮದ ನಡೆಯನ್ನು ಸರಿಯಾಗಿ ಅರಿತವರನ್ನು, ಬಾಹ್ಯ-ಅಂತರಗಳಲ್ಲಿ ಅಂದರೆ ಮೈ-ಮನಸ್ಸಿನ ಶುದ್ಧಿಯನ್ನು ಕಾಪಾಡಿಕೊಂಡವರನ್ನು, ಧನ-ಜನರ ವಿಷಯದಲ್ಲಿ ಲೋಭರಹಿತರನ್ನು ಆಯ್ಕೆ ಮಾಡಬೇಕು. ಅಂತಹವರ ಮಾತು ಇಡೀ ಸಮೂಹಕ್ಕೆ ಹಿತವಾದುದಾಗಿರುತ್ತದೆ. ಸಮೂಹದ ಸದಸ್ಯರು ಒಮ್ಮೆ ಆರಿಸಿದ ಮೇಲೆ ನಾಯಕನ ಮಾತನ್ನು ಅಕ್ಷರಶಃ ಅನುಸರಿಸಬೇಕು. ಆಯ್ಕೆ ಮಾಡುವ ಮುನ್ನ ಯೋಗ್ಯತೆ ಪರಿಶೀಲಿಸಿ ಆಯ್ಕೆ ಆದ ನಂತರ ಅನುಸರಿಸುವುದು ಎರಡೂ ಅವಶ್ಯಕ. ಇಂತಹ ನಡೆ ರಾಷ್ಟ್ರದ ಒಳಿತಿಗೆ ಸದಾ ಕಾರಣ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ