ಧರ್ಮಾಚರಣೆ ೧೩೭

ಧರ್ಮಾಚರಣೆ-೧೩೮

ವ್ಯತೀಪಾತೋ ಗಜಚ್ಛಾಯಾ ಗ್ರಹಣಂ ಚಂದ್ರಸೂರ್ಯಯೋಃ | ಶ್ರಾದ್ಧಂ ಪ್ರತಿರುಚಿಶ್ಚೈವ ಶ್ರಾದ್ಧಕಾಲಾಃ ಪ್ರಕೀರ್ತಿತಾಃ ||ಯಾಜ್ಞವಲ್ಕ್ಯ ಸ್ಮೃತಿ||

ವ್ಯತೀಪಾತಯೋಗ, ಸೂರ್ಯನು ಹಸ್ತಾನಕ್ಷತ್ರದಲ್ಲೂ-ಚಂದ್ರನು ಮಖಾನಕ್ಷತ್ರದಲ್ಲಿ ಇದ್ದಾಗ ಅದು ಗಜಚ್ಛಾಯಾಯೋಗ,  ಸೂರ್ಯ ಹಾಗೂ ಚಂದ್ರನ ಗ್ರಹಣಕಾಲ, ಯುಗಾದಿ, ಮನ್ವಾದಿತಿಥಿಗಳು ಹಾಗೂ ಒಂದು ವೇಳೆ ಶ್ರಾದ್ಧ ಮಾಡಬೇಕೆಂದು ಮನಸ್ಸಿಗೆ ಅನಿಸಿದರೆ ಆ ಕೂಡಲೇ ಶ್ರಾದ್ಧ ಮಾಡಬೇಕು. ಗ್ರಹಣದ ಸಮಯದಲ್ಲಿ ರಾತ್ರಿಶ್ರಾದ್ಧಕ್ಕೂ ಅವಕಾಶವಿದೆ. ಹಾಗಾಗಿ ಶ್ರದ್ಧೆಯೇ ಪ್ರಧಾನವಾಗಿ ನಿಯಮಗಳು ಪೂರಕವಾಗಿ ನಡೆಸುವ ಪಿತೃಕರ್ಮ ಶ್ರಾದ್ಧ. ಇಷ್ಟು ಕಾಲ ಹೇಳಿಯೂ ಒಮ್ಮೆಯೂ ಮಾಡದೇ ಹೋದಾಗ ಪಿತೃದೇವತೆಗಳ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩