ಧರ್ಮಾಚರಣೆ ೧೩೧
ಧರ್ಮಾಚರಣೆ-೧೩೧
ಶ್ರಾಂತಸಂವಾಹನಂ ರೋಗಿಪರಿಚರ್ಯಾ ಸುರಾರ್ಚನಮ್ | ಪಾದಶೌಚಂ ದ್ವಿಜೋಚ್ಛಿಷ್ಟಂ ಮಾರ್ಜನಂ ಗೋಪ್ರದಾನವತ್|| ಯಾಜ್ಞವಲ್ಕ್ಯ ಸ್ಮೃತಿ||
ಈಗಿನ ಕಾಲದಲ್ಲಿ ಗೋವನ್ನು ಪೋಷಿಸುವವರೇ ಕಡಿಮೆ. ಅಂತಹುದರಲ್ಲಿ ಗೋದಾನ ಕೊಡುವುದಾದರೆ ತೆಗೆದುಕೊಳ್ಳಲು ಜನರೇ ಸಿಗುವುದಿಲ್ಲ. ಅದರ ಬದಲಿಗೆ ದೂರಪ್ರಯಾಣ ಮಾಡಿ ದಣಿದ ಮನುಷ್ಯನಿಗೆ ಆಸನ-ಅಶನ-ಶಯನದ ವ್ಯವಸ್ಥೆ ಮಾಡುವುದು, ಭಯಂಕರ ರೋಗದಿಂದ ಬಳಲುವ ವ್ಯಕ್ತಿಗೆ ಔಷಧ-ನೀರು ಮೊದಲಾದವನ್ನು ಕೊಟ್ಟು ಉಪಚರಿಸುವುದು, ದೇವರನ್ನು ಬಗೆಬಗೆಯಲ್ಲಿ ಪೂಜಿಸುವುದು, ಜ್ಞಾನಿಗಳ ಕಾಲು ತೊಳೆಯುವುದು, ಸಂತರ್ಪಣೆಗಳಲ್ಲಿ ಜನರ ಎಂಜಲೆಲೆಯನ್ನು ತೆಗೆಯುವುದು ಮೊದಲಾದ ಕಾರ್ಯಗಳು ಶ್ರದ್ಧೆಯಿಂದ ಮಾಡಿದಾಗ ಗೋದಾನದ ಪೂರ್ಣಫಲ ದೊರಕುವುದು.ಈಗಿನ ಆಧುನಿಕ ಧಾವಂತದ ಬದುಕಿನಲ್ಲಿ ಈ ಮಾರ್ಗ ಅತ್ಯಂತ ಸೂಕ್ತವಾಗಿದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ