ಧರ್ಮಾಚರಣೆ ೧೪೧
ನ ಯೋಷಿತ್ಪತಿಪುತ್ರಾಭ್ಯಾಂ ನ ಪುತ್ರೇಣ ಕೃತಂ ಪಿತಾ | ದದ್ಯಾದೃತೇ ಕುಟುಂಬಾರ್ಥಾನ್ನ ಪತಿಃ ಸ್ತ್ರೀಕೃತಂ ತಥಾ || ಯಾಜ್ಞವಲ್ಕ್ಯ ಸ್ಮೃತಿ||
ಕುಟುಂಬ ಪೋಷಣೆಯನ್ನು ಬಿಟ್ಟು ಬೇರೆ ಉದ್ದೇಶದಿಂದ ಪತಿಯು ಮಾಡಿದ ಸಾಲವನ್ನು ಪತ್ನಿಯು, ಪುತ್ರನು ಮಾಡಿದ ಋಣವನ್ನು ತಾಯಿ-ತಂದೆಯರು, ಪತ್ನಿ ಮಾಡಿದ ಋಣವನ್ನು ಪತಿಯು ಹಿಂದಿರುಗಿಸಬಾರದು. ಒಂದು ವೇಳೆ ಕುಟುಂಬ ಪೋಷಣಾರ್ಥವಾಗಿ ಸಾಲ ಮಾಡಿದ್ದರೆ ಅದನ್ನು ಅವರ ಕಾಲದ ನಂತರ ಮಕ್ಕಳು ತೀರಿಸಬೇಕು. ಹಾಗಾಗಿ ಸಾಲ ಮಾಡುವ ಮುನ್ನ ನಮ್ಮ ಆಯುಷ್ಯ ಪ್ರಮಾಣ, ಉದ್ದೇಶ, ದೀರ್ಘಕಾಲದ ಪ್ರಯೋಜನ ಇವುಗಳನ್ನು ವಿಚಾರ ಮಾಡಿ ಮುಂದುವರೆಯಬೇಕು. ವಸ್ತು-ವಾಹನ-ಅಲಂಕಾರ ಮೊದಲಾದ ವಿಷಯಗಳಿಗೆ ಹೆಚ್ಚು ಋಣಭಾರ ಹೊಂದಿದಷ್ಟೂ ಅದು ಆಪತ್ತಿನಲ್ಲಿ ಎಲ್ಲರಿಗೂ ಹಾನಿ ತರುತ್ತದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ