ಧರ್ಮಾಚರಣೆ ೧೨೮
ಧರ್ಮಾಚರಣೆ-೧೨೮
ನ ವಿದ್ಯಯಾ ಕೇವಲಯಾ ತಪಸಾ ವಾಪಿ ಪಾತ್ರತಾ | ಯತ್ರ ವೃತ್ತಮಿಮೇ ಚೋಭೇ ತದ್ಧಿ ಪಾತ್ರಂ ಪ್ರಕೀರ್ತಿತಮ್ || ಯಾಜ್ಞವಲ್ಕ್ಯ ಸ್ಮೃತಿ||
ಕೇವಲ ಅಪಾರ ವಿದ್ಯೆಯನ್ನು ಗಳಿಸಿದ ಮಾತ್ರಕ್ಕೆ ಅಥವಾ ತುಂಬಾ ಅನುಷ್ಠಾನ-ತಪಸ್ಸು ಮಾಡುತ್ತಾರೆಂಬ ಕಾರಣಕ್ಕೆ ಮನುಷ್ಯನು ಪಾತ್ರತೆಯನ್ನು ಪಡೆಯುವುದಿಲ್ಲ. ಉತ್ತಮ ವಿದ್ಯೆ, ಉತ್ತಮ ಅನುಷ್ಠಾನದ ಜೊತೆಗೆ ನಮ್ಮ ನಡತೆಯೂ ಅದಕ್ಕೆ ಅನುಸಾರಿಯಾಗಿದ್ದಾಗ ಮಾತ್ರ ಇಹ-ಪರದಲ್ಲಿ ಪಾತ್ರನಾಗಲು ಅಂದರೆ ಯೋಗ್ಯನಾಗಲು ಸಾಧ್ಯ. ಅಪಾರ ವಿದ್ಯೆ ಗಳಿಸಿ ಯಾರಿಗೂ ಬೋಧಿಸದೇ ಅಹಂಕಾರದಿಂದ ಮೆರೆದರೆ ಅದೇ ಅವರಿಗೆ ಕೆಡುಕು. ಜ್ಞಾನದ ದಾಹ ಇಲ್ಲದೇ ಕೇವಲ ಕರ್ಮಮಾರ್ಗದಲ್ಲೇ ಮುಳುಗೇಳುತ್ತಿದ್ದರೆ ಅವರದ್ದೂ ಮೋಕ್ಷಗಾಮಿಯಾಗದ ಬದುಕು. ಇವೆರಡೂ ಇದ್ದೂ ಜೊತೆಗೆ ಸ್ವಜನ ಪಕ್ಷಪಾತ-ಆತ್ಮಪ್ರಶಂಸೆ-ಧನದಾಹ- ಕೀರ್ತಿಕಾಮನೆ-ದೋಷೈಕದರ್ಶನ ಮೊದಲಾದ ಅವಗುಣಗಳು ಇಲ್ಲದಿದ್ದರೆ ಅವರು ಎಲ್ಲಾ ಬಗೆಯಿಂದಲೂ ಯೋಗ್ಯರೆನಿಸುವರು. ಇಂತಹವರಿಗೆ ನೀಡುವ ಮಾನ ಸನ್ಮಾನವಾಗುವುದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ